ಗ್ರಾಮಭಿವೃದ್ಧಿ ಯೋಜನೆಯ ತುಂಬೆ ವಲಯದ 2023-24 ನೆ ಸಾಲಿನ “ಸಾಧನಾ ಸ್ನೇಹಕೂಟ”
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್( ರಿ) ಬಂಟ್ವಾಳ ಇದರ ತುಂಬೆ ವಲಯದ 2023- 24 ನೇ ಸಾಲಿನ ಸಾಧನ ಸ್ನೇಹಕೋಟ ಕಾರ್ಯಕ್ರಮ ನರಿಕೊಂಬು ಗ್ರಾಮದ ಮಾನಸ್ ನಿಲಯದಲ್ಲಿ ಜರಗಿತು.

2023-24 ಸಾಲಿನಲ್ಲಿ ತುಂಬೆ ವಲಯದ ಏಳು ಒಕ್ಕೂಟಗಳಾದ ಪರಂಗಿಪೇಟೆ, ಸುಜೀರ್ ,ತುಂಬೆ ,ಕಳ್ಳಿಗೆ, ನರಿಕೊಂಬು ಎ, ನರಿಕೊಂಬು ಬಿ, ನಂದಾವರ ಒಕ್ಕೂಟಗಳಲ್ಲಿ ವಿಶೇಷ ಸಾಧನೆ ಮಾಡಿ ಗುರಿ ಸಾಧಿಸಿದ ಸೇವಾ ಪ್ರತಿನಿಧಿಗಳ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳದ ತಾಲೂಕು ಯೋಜನಾಧಿಕಾರಿಯಾಗಿದ್ದ ಮಾಧವ ಗೌಡ ಯೋಜನೆಯ ಜನಜಾಗೃತಿ ವೇದಿಕೆಗೆ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದು ಅವರನ್ನು ಯೋಜನೆಯ ತುಂಬೆ ವಲಯದ ಪರವಾಗಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತಾಡಿದ ಮಾಧವ ಗೌಡ ಯಾವುದೇ ಗುರಿ ಸಾಧಿಸಬೇಕಾದರೆ ಹೃದಯ ಸಿರಿವಂತಿಗೆ ಅಗತ್ಯ, ಇದಕ್ಕೆ ತುಂಬೆ ವಲಯವು ಮಾದರಿಯಾಗಿದೆ, ಆ ಕಾರಣಕ್ಕಾಗಿ ತುಂಬೆ ವಲಯವು ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಸಾಧನೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ ಎಂದರು.
ಬಂಟ್ವಾಳ ತಾಲೂಕಿನ ನೂತನ ಯೋಜನಾಧಿಕಾರಿ ಬಾಲಕೃಷ್ಣ ಎಂ , ಬಂಟ್ವಾಳ ತಾಲೂಕು ಕೃಷಿ ಮೇಲ್ವಿಚಾರಕ ಜನಾರ್ಧನ್, ಆಂತರಿಕ ಲೆಕ್ಕ ಪರಿಶೋಧಕ ರಾಜೇಶ್, ಪ್ರಬಂಧಕ ಧರ್ಮ, ಸಹ ಪ್ರಬಂಧಕ ದಿವ್ಯ, ನೋಡೆಲ್ ಅಧಿಕಾರಿ ಪ್ರತಾಪ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚಂದ್ರಮೋಹಿನಿ,ತುಂಬೆ ವಲಯಕ್ಕೆ ಸಂಬಂಧಪಟ್ಟ ಎಲ್ಲಾ ಒಕ್ಕೂಟಗಳ ಸೇವ ಪ್ರತಿನಿಧಿಗಳು,ವಿ ಎಲ್ ಇ ಗಳು ಉಪಸ್ಥಿತರಿದ್ದರು. ತುಂಬಿಹೊಳೆಯ ಮೇಲ್ವಿಚಾರಕಿ ಮಮತ ಸಂತೋಷ್ ಪ್ರಸ್ತಾವಿಸಿ, ಸ್ವಾಗತಿಸಿದರು.