ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ : ಚುನಾವಣೆಗೆ ಭರ್ಜರಿ ತಯಾರಿ
ಕೈಕಂಬ: ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರು ಮತಯಾಚನೆ ಆರಂಭಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ, ವಕೀಲ ಅಶ್ವನಿ ಕುಮಾರ್ ರೈ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ್ ಜೈನ್, ಕೆ.ಪದ್ಮನಾಭ ರೈ, ಕೆ.ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ವಕೀಲ ಚಂದ್ರಶೇಖರ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಲೋಲಾಕ್ಷ ಶೆಟ್ಟಿ, ಚಂದ್ರಹಾಸ ಪಲ್ಲಿಪಾಡಿ, ಉಮೇಶ್ ಆಚಾರ್ಯ, ಆಲ್ಬರ್ಟ್ ಮಿನೇಜಸ್, ಮಲ್ಲಿಕಾ ಶೆಟ್ಟಿ, ಜಯಂತಿ ವಿ.ಪೂಜಾರಿ, ಮಧುಸೂಧನ್ ಶೆಣೈ, ಯುವವಾಹಿನಿ ಘಟಕ ಅಧ್ಯಕ್ಷ ಹರೀಶ ಕೊಟ್ಯಾನ್ ಮತ್ತಿತರರು ಇದ್ದರು.