“ಎಂಥ ಲೋಕವಯ್ಯ” ಬೀದಿ ನಾಟಕ
ಬಂಟ್ವಾಳ: ಪ್ರಧಾನಿ ನರೇಂದ್ರಮೋದಿಯವರ 10 ವರ್ಷದ ಆಡಳಿತಾವಧಿಯಲ್ಲಾದ ಸಾಧನೆಗಳನ್ನು ಬಿಂಬಿಸುವ”ಎಂಥ ಲೋಕವಯ್ಯ”ಬೀದಿ ನಾಟಕಕ್ಕೆ ಬಿ.ಸಿ.ರೋಡಿನ ಮೇಲ್ಸ್ ತುವೆಯ ತಳಭಾಗದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕ ಸರಪಾಡಿ ಆಶೋಕ ಶೆಟ್ಟಿ, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಬಂಟ್ವಾಳ ಮಂಡಲದ ಉಪಾಧ್ಯಕ್ಷ ರೋನಾಲ್ಡ್ ಡಿಸೋಜ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಬಳಿಕ ರಂಗ ಕಲಾವಿದ ದಿನೇಶ್ ಅತ್ತಾವರ ನೇತೃತ್ವದ ಕಲಾವಿದರ ತಂಡದಿಂದ ಬೀದಿ ನಾಟಕ ಪ್ರದರ್ಶನ ನಡೆಯಿತು.