Published On: Mon, Mar 18th, 2024

ಮಕ್ಕಳಿಗೆ ಮೂಲ ಸಂಸ್ಕೃತಿಯ ಅರಿವು ಮೂಡಿಸಿ: ವಿಜಯಲಕ್ಷ್ಮಿ ಕಟೀಲು

ಬಂಟ್ವಾಳ: ಮಕ್ಕಳಿಗೆ ಮೂಲ ಸಂಸ್ಕೃತಿ ಕಲಿಸಿ ಸ್ವಾಭಿಮಾನದ ಬದುಕು ಕಟ್ಟಲು ಪ್ರೆರೇಪಿಸಿ ಎಂದು ಸಾಹಿತಿ ಮಂಚಿ ಕೊಲ್ನಾಡು ಪ್ರೌಢಶಾಲಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಅಭಿಪ್ರಾಯ ಪಟ್ಟರು.

ಭಾನುವಾರ ಬಂಟ್ವಾಳ ಮಂಜುನಾಥಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ.ಟ್ರಸ್ಟ್ (ರಿ)ಬಂಟ್ವಾಳ ಇದರ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ “ಹದಿಹರೆಯದ ಮಕ್ಕಳನ್ನು ಸಭ್ಯ ನಾಗರಿಕರಗಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತಾಡಿದರು.

ಮಕ್ಕಳನ್ನು ಶಾಲೆಯ ತರಗತಿಯಲ್ಲಿ ಪಡೆಯುವ ಅಂಕಗಳ ಹಿಂದೆ ಹೋಗದೆ ಸಂಸ್ಕಾರ, ಸಂಸ್ಕೃತಿಯ ಹಿಂದೆ ಹೋಗುವಂತೆ ಬೆಳೆಸಬೇಕು, ಮಕ್ಕಳಿಗೆ ಮೊದಲು ಮನೆ ಕೆಲಸ ಮಾಡಲು ಕಲಿಸಿ,  ಪ್ರೀತಿ ವಾತ್ಸಲ್ಯದಿಂದ ದಾರಿ ತಪ್ಪದ ರೀತಿಯಲ್ಲಿ ಬೆಳೆಸುವಂತೆ ಕಿವಿಮಾತು ಹೇಳಿದರು.

ಬಂಟ್ವಾಳ ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳೆ ಸ್ವಾವಲಂಬಿಯಾಗಿ, ಸಂಘಟನಾತ್ಮಕವಾಗಿ ಬೆಳೆಯಲು ಜ್ಞಾನವಿಕಾಸ ಕಾರ್ಯಕ್ರಮಗಳು ಸ್ಪೂರ್ತಿದಾಯಕ ವಾಗಿದೆ ಎಂದರು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿದ್ದ ಜಿ.ಪಂ. ಮಾಜಿ ಸದಸ್ಯೆ ಸುಲೋಚನಾ ಜಿ.ಕೆ ಭಟ್ ಮಾತನಾಡಿ,ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಲ್ಲಿ ಅರಿವು ಮೂಡಿಸಿ ಮಾತೆಯರನ್ನು ಸ್ವಾವಲಂಬಿಗಳಾಗಿ ಮಾಡಿಸುವ ಉದ್ದೇಶದಿಂದ ಪ್ರಾರಂಭವಾದ ಕೇಂದ್ರವೇ ಮಹಿಳಾ ಜ್ಞಾನವಿಕಾಸ ಕೇಂದ್ರಗಳು.

ಈ ಮೂಲಕ ಮಹಿಳೆಯರಿಗೆ ಸೂಕ್ತ ಮಾಹಿತಿ, ತರಬೇತಿ ನೀಡಿ ಸ್ವಾಲಂಬಿ ಜೀವನ ನಡೆಸಲು ಪ್ರೇರೇಪಿಸಿ, ನಾಯಕತ್ವ ಗುಣವನ್ನು ಹೊಂದುವಂತೆ ಮಾಡಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವ ಕೆಲಸವಾಗುತಿದೆ ಎಂದರು.                        

ಈ ಸಂದರ್ಭದಲ್ಲಿ ಜ್ಞಾನವಿಕಾಸ ತಂಡಗಳಿಗೆ ಹೂ ಗುಚ್ಚ ತಯಾರಿ, ರಂಗೋಲಿ, ಜಾನಪದ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು, ಬಂಟ್ವಾಳ ಎಸ್ ವಿ ಎಸ್ ಶಾಲಾ ಶಿಕ್ಷಕಿ  ಪೂರ್ಣಿಮಾ  ತೀರ್ಪುಗಾರರಾಗಿ ಸಹಕರಿಸಿದರು.

 ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಅತ್ಯುತ್ತಮ ಜ್ಞಾನವಿಕಾಸ ಕೇಂದ್ರಗಳನ್ನು ಗುರುತಿಸಿ ಗೌರವಿಸಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್,  ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ ವಿಟ್ಲದ ನಿವೃತ ಯೋಜನಾಧಿಕಾರಿ ಸುಧಾ ಜೋಶಿ, ಉಪಸ್ಥಿತರಿದ್ದರು.               

ಜ್ಞಾನವಿಕಾಸ ಸದಸ್ಯರಾದ ಜಯಲಕ್ಷ್ಮಿ, ಸರೋಜ ಪ್ರಾರ್ಥಿಸಿ, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾದವ ಗೌಡ ಪ್ರಸ್ತಾವಿಸಿ, ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಧಿಕಾರಿ ಕಮಲಾಕ್ಷಿ ವಂದಿಸಿದರು, ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಕಾರ್ಯಕ್ರಮ ನೀರೂಪಿಸಿದರು.                  

ವಲಯ ಮೇಲ್ವಿಚಾರಕಿಗಳಾದ ಅಶ್ವಿನಿ, ರೂಪ, ತಾಲೂಕು ಕೃಷಿ ಅಧಿಕಾರಿ ಜನಾರ್ಧನ್, ಆಂತರಿಕ ಲೆಕ್ಕ ಪರಿಶೋಧಕ ರಾಜೇಶ್ ಸಹಕರಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter