ಹೊಕ್ಕಾಡಿಗೋಳಿ ಕೊಡಂಗೆ: ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ ಜಿಲ್ಲಾ ಕಂಬಳ ಸಮಿತಿ ತೀರ್ಮಾನಕ್ಕೆ ಬದ್ಧರಾಗಬೇಕು: ಬೆಳಪು ದೇವಿಪ್ರಸಾದ್ ಶೆಟ್ಟಿ ಪ್ರಥಮ ಬಾರಿಗೆ ‘ಲೇಸರ್ ಫೋಟೊ ಫಿನಿಶಿಂಗ್ ಆರಂಭ’
ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಹಲವು ವಿಧದ ಹೋರಾಟಗಳ ಮೂಲಕ ಉಳಿಸಿಕೊಂಡು ಬಂದಿರುವ ಕಂಬಳ ಕೂಟವು ಶಿಸ್ತುಬದ್ಧವಾಗಿ ಮುನ್ನಡೆಸಲು ಜಿಲ್ಲಾ ಕಂಬಳ ಸಮಿತಿ ಕೈಗೊಳ್ಳುವ ಎಲ್ಲಾ ತೀರ್ಮಾನ ಮತ್ತು ನಿಯಮಾವಳಿಗೆ ಬದ್ಧರಾಗಿರಬೇಕು. ಕೇವಲ ಸಣ್ಣಪುಟ್ಟ ಗೊಂದಲ ಮತ್ತು ವೈಯಕ್ತಿಕ ಹಿತಾಸಕ್ತಿಗೆ ಒಂದು ಗ್ರಾಮದಲ್ಲಿ ಒಂದೇ ದಿನ ಎರಡು ಕಂಬಳ ನಡೆಸುವುದು ಖೇದಕರ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆೆಟ್ಟಿ ಹೇಳಿದ್ದಾರೆ.

ಇಲ್ಲಿನ ಹೊಕ್ಕಾಡಿಗೋಳಿ ಕೊಡಂಗೆ ಎಂಬಲ್ಲಿ ವೀರ ವಿಕ್ರಮ ಕಂಬಳ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿದ ವೀರ-ವಿಕ್ರಮ ಜೋಡುಕರೆ ಕಂಬಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಪೂಂಜ ಕ್ಷೇತ್ರದ ಅರ್ಚಕ ಪ್ರಕಾಶ ಆಚಾರ್ಯ ‘ವೀರ-ವಿಕ್ರಮ’ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಇದೇ ವೇಳೆ ಜಿಲ್ಲಾ ಕಂಬಳ ಸಮಿತಿ ವತಿಯಿಂದ ಪ್ರಥಮ ಬಾರಿಗೆ ಅಳವಡಿಸಲಾದ ‘ಲೇಸರ್ ಫೋಟೊ ಫಿನಿಶಿಂಗ್’ ವ್ಯವಸ್ತೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ‘ಜಿಲ್ಲಾ ಕಂಬಳ ನಿಗದಿಗೊಳಿಸಿದ ದಿನ ನಡೆಯುವ ಕಂಬಳ ಅಧಿಕೃತವಾಗುತ್ತದೆ’ ಎಂದು ಅವಗರು ಹೇಳಿದರು.
ಜಿಲ್ಲಾ ಕಂಬಳ ಸಮಿತಿ ಪ್ರ.ಕಾರ್ಯದರ್ಶಿ ಲೋಕೆಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ಮಾತನಾಡಿ, ‘ಇದೇ ಪ್ರಥಮ ಬಾರಿಗೆ ಒಂದೇ ದಿನ ಒಂದೇ ಗ್ರಾಮದಲ್ಲಿ ಎರಡೆರಡು ಕಂಬಳ ನಡೆಯಲು ಕಾರಣೀಭೂತರಾದವರಿಗೆ ದೇವರು ಶಿಕ್ಷೆ ನೀಡಲಿ’ ಎಂದರು. ಮಾಜಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಕೂಳೂರು, ಪಶು ವೈದ್ಯ ಡಾ.ಶ್ರೀಧರ ಶೆಟ್ಟಿ, ಸಿದ್ದಕಟ್ಟೆ ಹಿರಿಯ ವೈದ್ಯ ಡಾ.ಕೆ.ಪ್ರಭಾಚಂದ್ರ ಜೈನ್, ಡಾ.ಸುದೀಪ್ ಕುಮಾರ್ ಜೈನ್, ಪತ್ರಕರ್ತ ಲೀಲಾಕ್ಷ ಕರ್ಕೇರಾ, ಕದ್ರಿ ನವನೀತ ಶೆಟ್ಟಿ, ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ತೀರ್ಪುಗಾರರ ಸಂಚಾಲಕ ವಿಜಯಕುಮಾರ್ ಕಂಗಿನಮನೆ, ಪ್ರಮುಖರಾದ ಸಂತೋಷ್ ಕುಮಾರ್ ಚೌಟ, ಚಂದ್ರಶೇಖರ ಗೌಡ ಕಾರಂಬಡೆ, ಹರೀಶ ಆಚಾರ್ಯ, ಕೆ.ಪರಮೇಶ್ವರ ಪೂಜಾರಿ, ಜೋಕಿಂ ಸಿಕ್ವೆರಾ, ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಶಶಿಧರ ಶೆಟ್ಟಿ ಕಲ್ಲಾಪು, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸುರೇಶ್ ಶೆಟ್ಟಿ ಕುತ್ಲೋಡಿ, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಕಿರಣ್ ಕುಮಾರ್ ಮಂಜಿಲ, ಚಂದ್ರಶೇಖರ ಕೊಡಂಗೆ, ವಸಂತ ಶೆಟ್ಟಿ ಕೇದಗೆ, ಸಂದೇಶ ಶೆಟ್ಟಿ ಪೊಡುಂಬ, ಉಮೇಶ್ ಶೆಟ್ಟಿ ಕೊನೆರೊಟ್ಟುಗುತ್ತು, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಸುಧಾಕರ ಚೌಟ, ಜನಾರ್ದನ ಬಂಗೇರ, ಉಮೇಶ್ ಹಿಂಗಾಣಿ, ಬಿ.ಶಿವಾನಂದ ರೈ, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ ಮತ್ತಿತರರು ಇದ್ದರು.
ಶಾಸಕರಾದ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್ ಭೇಟಿ ಶುಭ ಹಾರೈಸಿದರು.
ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಸ್ವಾಗತಿಸಿ, ಗೌರವ ಸಲಹೆಗಾರ ಸುರೇಶ ಶೆಟ್ಟಿ ಸಿದ್ದಕಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಕಿಶೋರ್ ಶೆಟ್ಟಿ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು.