ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಶಿವ ಕಲ್ಪೋಕ್ತ ಪೂಜೆ
ಕೈಕಂಬ: ಅಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಾ.೮ರಂದು ಶುಕ್ರವಾರ ಮಹಾಶಿವರಾತ್ರಿ ಪ್ರಯುಕ್ತ ಬೆಳಗ್ಗೆ ೮:೦೦ಗಂಟೆಗೆ ಸಾರ್ವಜನಿಕ ಗಣಹೋಮ ಹಾಗೂ ಸಂಜೆ ೪:೦೦ರಿಂದ ಸಾರ್ವಜನಿಕ ಶ್ರೀ ಶಿವ ಕಲ್ಪೋಕ್ತ ಪೂಜೆ ನೆರವೇರಲಿದೆ.
ಸಂಜೆ ೬:೦೦ಗಂಟೆಯಿಂದ ರಾತ್ರಿ ೧೨:೦೦ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.