Published On: Sat, Jan 13th, 2024

ಬಿ.ಸಿ.ರೋಡು: ಸರಣಿ ಕಳವು ಪ್ರಕರಣ ; ಆರೋಪಿಯ ಬಂಧನ‌

ಬಂಟ್ವಾಳ: ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹೊಟೇಲ್ ಸಹಿತ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ‌ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ಪದಂಗಡಿ ನಿವಾಸಿ ಹಮೀದ್ ಯಾನೆ, ಕುಂಜ್ಞಿಮೋನು ಯಾನೆ ಜಾಫರ್  ಬಂಧಿತ ಆರೋಪಿಯಾಗಿದ್ದಾನೆ.

ಎರಡು ವಾರಗಳ ಹಿಂದೆ ಬಿ.ಸಿ.ರೋಡಿನ ಅನಿಯಾ ದರ್ಬಾರ್ ಹಾಗೂ ಇಲ್ಲಿನ‌ ಕೆಲ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂ ನಗದು ಕಳವು ಮಾಡಲಾಗಿತ್ತು, ಈ ಬಗ್ಗೆ ಹೊಟೇಲ್ ಅನಿಯಾ ದರ್ಬಾರ್ ಮಾಲಕ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಮುಸುಕುಧಾರಿಯೋರ್ವ ಶಟರ್ ಮುರಿಯುವ ಸಹಿತ ಕಳವು ಮಾಡುವ ದೃಶ್ಯಗಳು ಹೊಟೇಲ್ ನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿ ವ್ಯಾಪಕ ವೈರಲ್ ಕೂಡ ಆಗಿತ್ತು.

ಇದರ ಆಧಾರದ ಮೇಲೆ ಪೋಲಿಸ್ ತಂಡ ಆರೋಪಿ ಹಮೀದ್ ಮಂಗಳೂರಿನಿಂದ ಬರುತ್ತಿದ್ದ ವೇಳೆ ಬಂಟ್ವಾಳದಲ್ಲಿ ಕಾರ್ಯಾಚರಣೆ ನಡೆಸಿ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈತ ಹಲವು ಕಳವು ಪ್ರಕರಣದ ಆರೋಪಿಯಾಗಿದ್ದು, ವಿವಿಧ ಠಾಣೆಯಲ್ಲಿ ಈತನ ಮೇಲೆ ಕಳವು ಪ್ರಕರಣ ದಾಖಲಾಗಿದೆ, ಜೊತೆಗೆ ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣಕ್ಕಾಗಿ ವಿವಿಧ ಠಾಣೆಗಳಲ್ಲಿ ವಾರೆಂಟ್ ಕೂಡ ಇರುವ ಬಗ್ಗೆ ಪೋಲಿಸ್ ವಿಚಾರಣೆ ವೇಳೆ ಬಯಲಿಗೆ ಬಂದಿದೆ.

ಬಂಟ್ವಾಳ ಡಿ.ವೈ‌ಎಸ್.ಪಿ. ವಿಜಯ ಪ್ರಸಾದ್ ಅವರ ನಿರ್ದೇಶನದಂತೆ, ಬಂಟ್ವಾಳ ನಗರ ಠಾಣಾ ಪೋಲೀಸ್ ನಿರೀಕ್ಷಕ  ಆನಂತ ಪದ್ಮನಾಭ ಅವರ ನೇತ್ರತ್ವದಲ್ಲಿ ಠಾಣಾಧಿಕಾರಿಗಳಾದ ರಾಮಕೃಷ್ಣ ಮತ್ತು ಕಲೈಮಾರ್ ಮತ್ತವರ ಸಿಬ್ಬಂದಿಗಳು ಬಂಧಿಸಿದ್ದಾರೆ.

ಸಿಬಂದಿಗಳಾದ ಇರ್ಷಾದ್. ಪಿ ಮತ್ತು ರಾಜೇಶ್ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾದ ಬಂಟ್ವಾಳ ಪೊಲೀಸರು

ಬಿ.ಸಿ.ರೋಡಿನಲ್ಲಿ ನಡೆದ ಎರಡು ಪ್ರತ್ಯೇಕ ಸರಣಿ ಕಳವು ಪ್ರಕರಣಗಳನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ, ಎರಡು ಪ್ರಕರಣದಲ್ಲಿ ಆರೋಪಿ ಮುಸುಕುಧಾರಿಗಳಾಗಿ ಬಂದು ಕೃತ್ಯ ನಡೆಸಿದ್ದರು, ಆರೋಪಿಗಳ ಸಣ್ಣ ಸುಳಿವು ‌ಇರದಿದ್ದು, ಇದೀಗ ಎರಡು ಸರಣಿ ಕಳವು ಪ್ರಕರಣದಲ್ಲಿ ಬಂಧಿಸಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಕೈಕಂಬ ಪೊಳಲಿ ದ್ವಾರದ ಬಳಿ ನಡೆದ ಸರಣಿ ಕಳವು, ಬಿ.ಸಿ.ರೋಡಿನಲ್ಲಿ ನಡೆದ ಸರಣಿ  ಕಳವಿನ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಲ್ಲದೆ,. ಅಂಗಡಿಯಿಂದ ವೃದ್ದೆಯೋರ್ವರ ಕುತ್ತಿಗೆಯಿಂದ ಸರ್ ಕಸಿದು ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿಗಳು ಕಳ್ಳರ ಬಂಧನ ಕಾರ್ಯಾಚರಣೆಯಲ್ಲಿ ಅವಿರತ ಶ್ರಮ ವಹಿಸಿದ್ದು, ಮೇಲಾಧಿಕಾರಿಗಳಿಂದ ಪ್ರಶಂಸೆಗೂ ಪಾತ್ರರಾಗಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter