ಧರ್ಮಸ್ಥಳದಿಂದ ಮಂಜೂರಾದ ಅನುದಾನದ ಚೆಕ್ ಹಸ್ತಾಂತರ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ ತುಂಬೆ ವಲಯದ ನರಿಕೊಂಬು ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಹಾಗೂ ಸಭಾಭವನದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಅನುದಾನದ ಚೆಕ್ಕನ್ನು ವೀರ ಮಾರುತಿ ವ್ಯಾಯಾಮ ಶಾಲೆಯ ಸಮಿತಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ತುಂಬೆ ವಲಯ ಮೇಲ್ವಿಚಾರಕಿ ಮಮತಾ, ವೀರಮಾರುತಿ ಮಂದಿರದ ಅಧ್ಯಕ್ಷ ಚಂದ್ರಹಾಸ ಕೊಡಿಮಜಲು, ನರಿಕೊಂಬು ಬಿ ಒಕ್ಕೂಟದ ಅಧ್ಯಕ್ಷ ಜಯಂತ, ಸದಸ್ಯರಾದ ಸುಬ್ಬಣ್ಣ ನಾಯ್ಕ ,ನರಿಕೊಂಬು ಎ ಒಕ್ಕೂಟದ ಉಪಾಧ್ಯಕ್ಷ ಗುಲಾಬಿ, ಸೇವಾ ಪ್ರತಿನಿಧಿಗಳಾದ ಕುಸುಮಾವತಿ, ಪ್ರತಿಭಾ, ವೀರಮಾರುತಿ ಮಂದಿರದ ಪದಾಧಿಕಾರಿಗಳಾದ ಯೋಗೀಶ್ ಮಾರುತಿ ನಗರ ಪ್ರಕಾಶ್ ಕೋಡಿ ಮಜಲು, ವೀರಮಾರುತಿ ಮಹಿಳಾ ಮಂಡಳಿಯ ಸದಸ್ಯ ಸಂಧ್ಯಾ, ಕವಿತಾ, ಗಿರಿಜಾ, ಜಾನಕಿ, ಮಂಜುಳ, ಲತಾ, ವನಿಲ ಮೊದಲಾದವರು ಉಪಸ್ಥಿತರಿದ್ದರು..