ಕಕ್ಯಬೀಡು: ಶ್ರೀ ಪಂಚದುರ್ಗಾ ಪರಮೇಶ್ವರಿ ದೇವೀ ಕ್ಷೇತ್ರ ನೂತನ ಅಂಗಣ ಬಂಡಿ ರಥಕ್ಕೆ ಅದ್ದೂರಿ ಸ್ವಾಗತ
ಬಂಟ್ವಾಳ: ತಾಲೂಕಿನ ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವೀ ಕ್ಷೇತ್ರ ಇದರ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ನೂತನವಾಗಿ ನಿರ್ಮಾಣಗೊಂಡ ಶ್ರೀ ದೇವಿಯ ನೂತನ ಅಂಗಣ ಬಂಡಿ ರಥವನ್ನು ಅದ್ದೂರಿ ಮೆರವಣಿಗೆ ಮೂಲಕ ಬುಧವಾರ ಸಂಜೆ ದೇವಸ್ಥಾನಕ್ಕೆ ಸಾಗಿಸಲಾಯಿತು.
ರಥವು ಬೆಳಗ್ಗೆ ಮೂಡುಬಿದಿರೆ ಅಶ್ವತ್ಥಪುರದಿಂದ ಹೊರಟು ಮಧ್ಯಾಹ್ನ ಕಲ್ಲೇರಿಯಲ್ಲಿ ವಿಶ್ರಾಂತಿ ಪಡೆಯಲಾಯಿತು. ಕಲ್ಲೇರಿಯಿಂದ ಬ್ಯಾಂಡ್, ವಾದ್ಯ, ಚೆಂಡೆ ವಾದನದೊಂದಿಗೆ ವೈಭವದ ಮೆರವಣಿಗೆಯಲ್ಲಿ ಹೊರಟ ರಥವು ಮೂರುಗೋಳಿ, ಪುತ್ತಿಲ, ಕಂಡಿಗ, ಉಳಿಪೋಸ್ಟ್, ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ, ಅಗಲ, ನೆಕ್ಕಿಲಪಲ್ಕೆ, ಪ್ರೌಢ ಶಾಲೆಯ ಬಳಿ, ದೇವಸ್ಥಾನದ ದ್ವಾರದ ಬಳಿ, ಗರಡಿ ಬಳಿ ಹಾಗೂ ದೇವರಕಟ್ಟೆಗಳ ಬಳಿ ರಥಕ್ಕೆ ಪುಷ್ಪಾರ್ಚನೆ ನಡೆಸಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.
ಕ್ಷೇತ್ರದ ಪ್ರ.ಅರ್ಚಕ ಶ್ರೀನಿವಾಸ ಅರ್ಮುಡ್ತಾಯ ಅವರ ಮಾರ್ಗದರ್ಶನದಲ್ಲಿ ಅರ್ಚಕ ರಾಜೇಂದ್ರ ಅರ್ಮುಡ್ತಾಯ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಾನಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಮಿತಿ ಅಧ್ಯಕ್ಷ ಡಾ.ಸತ್ಯಶಂಕರ ಶೆಟ್ಟಿ ಕಂಡಿಗ, ಮಾಜಿ ಅಧ್ಯಕ್ಷ ಉಳಿ ದಾಮೋದರ ನಾಯಕ್, ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಉತ್ಸವ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬಾರ‍್ದಡ್ ಗುತ್ತಿನವರು, ಉಳಿ ಗ್ರಾ.ಪಂ.ಉಪಾಧ್ಯಕ್ಷ ವಸಂತ ಸಾಲ್ಯಾನ್, ಮಾಜಿ ಅಧ್ಯಕ್ಷ ಸುರೇಶ್ ಮೈರ, ಸದಸ್ಯ ಚಿದಾನಂದ ರೈ ಕಕ್ಯ, ಸಮಿತಿ ಉಪಾಧ್ಯಕ್ಷ ಯತೀಂದ್ರ ಚೌಟ, ಗಂಪದಡ್ಡ, ಎ. ಮುತ್ತಪ್ಪ ಮಾಸ್ತರ್‌ಅಗಲ, ಕೋಶಾಧಿಕಾರಿ ಎ.ಸಂಜೀವ ಗೌಡ ಅಗಲ, ಉತ್ಸವ ಸಮಿತಿ ಉಪಾಧ್ಯಕ್ಷ ಡೀಕಯ್ಯ ಕುಲಾಲ್ ದಲ್ಯಂತಬಲ್, ಸೋಮಶೇಖರ ಕಕ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಿ.ನಾರಾಯಣ ರೈ ಅಟ್ಟದಡ್ಕ, ಜತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಭಂಡಾರಿ ಪುಣ್ಕೆದಡಿ, ಬಿ.ವಿಶ್ವನಾಥ ಸಾಲ್ಯಾನ್ ಬಿತ್ತ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್, ನಿವೃತ್ತ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಸದಸ್ಯರು, ಉತ್ಸವ ಸಮಿತಿ ಸದಸ್ಯರು, ಗ್ರಾ.ಪಂ.ಸದಸ್ಯರು, ಐವೆರ್ ಫ್ರೆಂಡ್ಸ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.