ಅಣ್ಣಳಿಕೆ ಫ್ರೆಂಡ್ಸ್ ಬಳಗ : ಪ್ರತಿಭಾನ್ವೇಷಣಾ ಕಾರ್ಯಕ್ರಮ
ಬಂಟ್ವಾಳ: ತಾಲೂಕಿನ ಕೊಯಿಲ ಅಣ್ಣಳಿಕೆ ಫ್ರೆಂಡ್ಸ್ ಬಳಗ ಇದರ ಆಶ್ರಯದಲ್ಲಿ ಲೊರೆಟ್ಟೊಹಿಲ್ ರೋಟರಿ ಕ್ಲಬ್ ಸಹಯೋಗದಲ್ಲಿ ೧೩ನೇ ವರ್ಷದ ಪ್ರತಿಭಾನ್ವೇಷಣಾ ಕಾರ್ಯಕ್ರಮ ಅಣ್ಣಳಿಕೆ ವಿಘ್ನೇಶ್ವರ ಕಲಾ ವೇದಿಕೆಯಲ್ಲಿ ನಡೆಯಿತು.
ಭಾರತೀಯ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಬಿ.ಎಸ್.ತೀರ್ಥಹಳ್ಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘಟಕ, ಸಾಮಾಜಿಕ ಕಾರ್ಯಕರ್ತ ಜಗದೀಶ್ ಕೊಯಿಲ ಮತ್ತು ಶ್ರವಣ್ ರಾಯಿ ಅವರನ್ನು ಸಮ್ಮಾನಿಸಲಾಯಿತು. ಕೊಯಿಲ ಹಿ.ಪ್ರಾ.ಶಾಲೆಯ ೫ರಿಂದ ೭ನೇ ತರಗತಿ ಮತ್ತು ಪ್ರೌಢಶಾಲಾ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ರೋಟರಿ ಕ್ಲಬ್ ಲೊರೆಟ್ಟೊಹಿಲ್ಸ್ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ವೇನೂರು ರೆಸಿಡೆನ್ಷಿಯಲ್ ಸ್ಕೂಲ್ ಶಿಕ್ಷಕಿ ಸುಜಾತಾ ಬಿ.ರಾಯಿ, ಕೊಯಿಲ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಭಾರತಿ ಬಿ. ಉದ್ಯಮಿಗಳಾದ ಲೋಕೇಶ್ ಪೆದಮಲೆ, ಪ್ರವೀಣ್ ಅಮೈ ಪಂಜಿಕಲ್ಲು, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ವಿಜಯ ಫೆರ್ನಾಂಡಿಸ್, ಹರಿಪ್ರಸಾದ್ ಶೆಟ್ಟಿ ಕುರ್ಡಾಡಿ, ಸುಮಿತ್ರಾ ಆರ್.ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ ಸ್ವಾಗತಿಸಿದರು. ಚಂದ್ರಹಾಸ ಅಣ್ಣಳಿಕೆ ವಂದಿಸಿದರು. ಆಕಾಶ್ ಸಹಕರಿಸಿದರು. ಪುರುಷೋತ್ತಮ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪರಿಸರದ ಅಂಗನವಾಡಿ, ಹಿ.ಪ್ರಾ.ಮತ್ತು ಪ್ರೌಢಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.