ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಪ್ಪದ ಪೂಜೆಯ ದಿನದಂದು ಏಕಾಹ ಭಜನೆ; “ಭಜನಾ ಮಂಗಳೋತ್ಸವ”
ಪೊಳಲಿ: ಅಪ್ಪದ ಪೂಜೆಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ನ.27ರಂದು ಬೆಳಗ್ಗೆ 8:30ರಿಂದ ವಿವಿಧ ಭಜನಾ ತಂಡಗಳಿಂದ “ಏಕಾಹ ಭಜನೋತ್ಸವ” ನಡೆದು, ನ.28ರಂದು ಬೆಳಗ್ಗೆ 8:30ಕ್ಕೆ “ಭಜನಾ ಮಂಗಳೋತ್ಸವ” ಜರುಗಿತು.
ಏಕಾಹ ಭಜನೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿಯಿಂದ ಭಜನೆ ಪ್ರಾರಂಭಗೊಂಡು ಮರುದಿನ ಬೆಳಗ್ಗಿನ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಮೊಕ್ತೇಸರರಾದ ಯು. ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ದೇವಳದ ಅನುವಂಶಿಕ ಮೊಕ್ತೇಸರ ಪವಿತ್ರಪಾಣಿ ಮಾಧವಭಟ್, ಅರ್ಚಕರಾದ ನಾರಾಯಣ ಭಟ್ ಪೊಳಲಿ, ಕೆ.ರಾಮ್ ಭಟ್ ಪೊಳಲಿ, ಪರಮೇಶ್ವರ್ ಭಟ್ ಪೊಳಲಿ, ಕ್ಷೇತ್ರದ ತಂತ್ರಿಗಳಾದ ಸುಬ್ರಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಸಾವಿರ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ನ.28ರಂದು ಮಂಗಳವಾರ ಬೆಳಗ್ಗೆ ರಾಜರಾಜೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ಮಂಗಳೋತ್ಸವ ನಡೆಯಿತು .ಹರಿವಿಠಲ್ ಜೈ ವಿಠಲ್ ವಿಠಲ್ ವಿಠಲ್ ಎಂದು ಭಜನೆಯೊಂದಿಗೆ ಕುಣಿಯುತ್ತಾ ನಾಮಸ್ಮರಣೆಯೊಂದಿಗೆ ಭಜನಾ ಮಂಗಳೋತ್ಸವ ನಡೆಯಿತು.