ಎಸ್.ಪಿ.ವೈ.ಎಸ್.ಎಸ್.ಸಮಿತಿಯ ವತಿಯಿಂದ ಸಾಮೂಹಿಕ ಗೋ ಪೂಜೆ, ಕರ್ಣ ವೇದ, ಮೂಗುತಿ ಧಾರಣಾ ಕಾರ್ಯಕ್ರಮ
ಕೈಕಂಬ: SPYSS ಸಮಿತಿಯ ವತಿಯಿಂದ ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಸಾಮೂಹಿಕ ಗೋ ಪೂಜೆ, ಕರ್ಣ ವೇದ, ಮೂಗುತಿ ಧಾರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕರ್ಮದ ಅಧ್ಯಕ್ಷತೆಯನ್ನು ಪೊಳಲಿ ನಗರದ ಹಿರಿಯ ಶಿಕ್ಷಕ ಉಮೇಶ್ ವಹಿಸಿದ್ದರು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಉಪಸ್ಥಿತರಿದ್ದರು.
ಪೊಳಲಿ ನಗರದ ಮಾರ್ಗದರ್ಶಕಿ ರೇಖಾ ಪ್ರಾಸ್ತಾವಿಕವಾಗಿ ಮಾತನಾಡಿ ದೀಪಾವಳಿಯ ಪರ್ವ ಕಾಲದಲ್ಲಿ ಗೋ ಪೂಜೆಯ ಮಹತ್ವ ನಮ್ಮಲ್ಲಿ ಇರುವ ತಾಮಸ ಗುಣಗಳು ನಾಶವಾಗಿ ಸಾತ್ವಿಕ ಗುಣಗಳು ಬೆಳೆಯಲಿ ಎಂದರು.
ಹಿರಿಯ ಶಿಕ್ಷಕ ಉಮೇಶ್ ಅಧ್ಯಕ್ಷೀಯ ಭಾಷಣದಲ್ಲಿ ಸಾಮೂಹಿಕ ಗೋ ಪೂಜೆ ಮಹತ್ವ ಸಮಿತಿಯ ಉದ್ದೇಶಗಳನ್ನು ವಿವರಿಸಿದರು.
ಕಾರ್ಯಕ್ರಮವು ಬೆಳ್ಳಿಗೆ 4.30 ಕ್ಕೆ ಸರಿಯಾಗಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಯೋಗಾಭ್ಯಾಸವನ್ನು ಶಿಕ್ಷಕರಾದ ಜನಾರ್ಧನ್, ದೀಪಿಕಾ, ಶಶಿರಾಜ್, ರೋಚನಾ, ಮಹಾಬಲ, ಪ್ರತಿಭಾ ನಡೆಸಿಕೊಟ್ಟರು.
ಪುರೋಹಿತ ದೀಪಕ್ ಶರ್ಮಾ ಅವರ ನೇತೃತ್ವದಲ್ಲಿ ಲಕ್ಷ್ಮೀ ಪೂಜೆ, ಗೋಪೂಜೆ ಹಾಗೂ ಅಗ್ನಿ ಹೋತ್ರ ಮತ್ತು ಕರ್ಣ ವೇದ ಪೊಳಲಿ ಸೀತಾರಾಮ ಆಚಾರ್ಯ ನಡೆಸಿಕೊಟ್ಟರು.
ಗೋ ಪೂಜೆಯ ಸೂಚನೆಯನ್ನು ಜಿಲ್ಲಾ ಚಿಂತನ ಕೂಟದ ಪ್ರಮುಖರಾದ ಲೋಕೇಶ್ ನಡೆಸಿಕೊಟ್ಟರು.
ಪೊಳಲಿ ನಗರದ ಮಾರ್ಗದರ್ಶಕಿ ರೇಖಾ ಪ್ರಾಸ್ತಾವಿಸಿದರು. ಸ್ಮಿತಾ ಕಾರ್ಯಕ್ರಮದ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕ ಪ್ರವೀಣ್ ವಂದಸಿದರು.
ಪೊಳಲಿ ನಗರದ ಪ್ರಮುಖರು ಹಾಗೂ ಸಿದ್ದಕಟ್ಟೆ, ಆರಂಬೋಡಿ, ಕುಕ್ಕಿಪಾಡಿ, ಪಾಂಗಲ್ಪಾಡಿ, ರಾಯಿ, ಸುವರ್ಣನಾಡು, ಅರಳ, ಪೊಳಲಿ, ಗುರುಪುರ, ಕೈಕಂಬ, ಮಿಜಾರು, ಕಡೆಗುಂಡ್ಯ, ಕುಪ್ಪೆಪದವು, ಕಾಂಬೆಟ್ಟು ಸೇರಿ ಒಟ್ಟು 232 ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.