ಪೊಳಲಿ ರಾಮಕೃಷ್ಣ ತಪೋವನದಲ್ಲಿ ನ.4 ರಿಂದ ನ.10ರ ವರೆಗೆ “ಹರಿಕಥಾ ಸಪ್ತಾಹ”
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನವೆಂಬರ್ 4ನೇ ಶನಿವಾರದಿಂದ 10 ಶುಕ್ರವಾರದ ವರೆಗೆ ಪ್ರತಿದಿನ ಸಂಜೆ 6:30ಕ್ಕೆ “ಹರಿಕಥಾ ಸಪ್ತಾಹ” ನಡೆಯಲಿರುವುದು.
ಹರಿಕಥೆ ನಡೆಸಿಕೊಡಲಿರುವ ಕಲಾವಿದರು ಹಾಗೂ ನಡೆಯಲಿರುವ ಕಥಾನಕ :
ನ.4ರಂದು ಶನಿವಾರ ಸಂಜೆ 6:30ಕ್ಕೆ ದೇವಕಿತನಯ ಕೊಡ್ಲು ಮಹಾಬಲ ಶೆಟ್ಟಿಯವರಿಂದ ʼಪಾಶುಪತಾ ಪ್ರಧಾನʼ, ಭಾನುವಾರ ನ.5 ಸಂಜೆ ಆಕಾಶವಾಣಿ ಕಲಾವಿದೆ ಮಂಜುಳಾ ಜಿ. ರಾವ್ ಅವರಿಂದ ʼಶ್ರೀ ಕೃಷ್ಣ ಕಾರುಣ್ಯʼ, ನ.6ರಂದು ಸೋಮವಾರ ಸಂಜೆ ಹರಿದಾಸ್ ಶ್ರೀ ಜಗದೀಶ್ ದಾಸ್ ಪೊಳಲಿಯವರಿಂದ ʼಭಕ್ತ ಸುದಾಮʼ, ನ.7ರಂದು ಮಂಗಳವಾರ ಸಂಜೆ ಈಶ್ವರದಾಸ್ ಕೊಪ್ಪೇಸರ ಇವರಿಂದ ʼಹರಿಶ್ಚಂದ್ರʼ, ನ.8ರಂದು ಬುಧವಾರ ಸಂಜೆ ಡಾ.ಎಸ್.ಪಿ. ಗುರುದಾಸ್ ಇವರಿಂದ ʼಶ್ರೀ ರಾಮಕೃಷ್ಣ ಅವತಾರ ಲೀಲೆʼ, ನ.9ರಂದು ಗುರುವಾರ ಸಂಜೆ ಶ್ರದ್ಧಾ ಭಟ್ ನಾಯರ್ ಪಳ್ಳ ಅಲಮ ಇವರಿಂದ ʼಗಿರಿಜಾ ಕಲ್ಯಾಣʼ, ನ.10ರಂದು ಶುಕ್ರವಾರ ಸಂಜೆ ಕಲಾ ವಾರಿಧಿ ತೋನ್ಸೆ ಪುಷ್ಕಳ್ ಕುಮಾರ್ ಇವರಿಂದ ʼಸತೀ ಸಾವಿತ್ರಿʼ ಎಂಬ ಕಥಾನಕವು ಜರುಗಲಿರುವುದು.