ಶಂಭೂರು: ತಂಬಾಕು ವಿರೋಧಿ ದಿನಾಚರಣೆ ಮತ್ತು ಸೆಲ್ಕೋ ಸೋಲಾರ್ ವಿತರಣಾ ಕಾರ್ಯಕ್ರಮ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್,ಬಂಟ್ವಾಳ ತಾಲೂಕು,ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಮತ್ತು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಪಾಣೆಮಂಗಳೂರು ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಂಭೂರು ವ್ಯಾಯಾಮ ಶಾಲೆಯಲ್ಲಿ ತಂಬಾಕು ವಿರೋಧಿ ದಿನಾಚರಣೆ ಮತ್ತು ಸೆಲ್ಕೋ ಸೋಲಾರ್ ವಿತರಣಾ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ದುಶ್ಚಟದಿಂದಾಗುವ ದುಷ್ಪರಿಣಾಮ ಮತ್ತು ಇದರ ಮುನ್ನೆಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎನ್ ಆರ್ ಎಲ್ ಎಂ ನ ಕ್ಲಸ್ಟರ್ ಮೇಲ್ವಿಚಾರಕಿ ಕುಸುಮ ತಂಬಾಕು ಸೇವನೆಯಿಂದಾಗುವ ಸಮಸ್ಯೆಗಳು ಮತ್ತು ತಡೆಗಟ್ಟುವ ವಿಧಾನ ಇದರಲ್ಲಿ ತಾಯಂದಿರ ಮತ್ತು ಮಕ್ಕಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ವ್ಯಾಯಾಮ ಶಾಲೆಯ ಅಧ್ಯಕ್ಷ ಆನಂದ ಎ.ಶಂಭೂರು,ಜನಜಾಗೃತಿ ವೇದಿಕೆಯ ಪಾಣೆಮಂಗಳೂರು ವಲಯ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ,ಗ್ರಾಮಾಬಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಜನಜಾಗೃತಿ ಸದಸ್ಯ ಪುರುಷೋತ್ತಮ ನಾಟಿ,ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ,ಸೆಲ್ಕೋ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕ ರವೀನ್ ಉಪಸ್ಥಿತರಿದ್ದರು.
ಇದೇ ವೇಳೆ ಹಸಿರು ಇಂಧನ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಘದ ಮುಖಾಂತರ ಪ್ರಗತಿ ನಿಧಿ ಪಡೆದು ಸೆಲ್ಕೋ ಸೋಲಾರ್ ಅಳವಡಿಕೆ ಮಾಡಿರುವ 43 ಕುಟುಂಬದ ಸದಸ್ಯರಿಗೆ ಸಾಂಕೇತಿಕವಾಗಿ ಸೋಲಾರ್ ವಿತರಿಸಲಾಯಿತು.
ಸೋಲಾರ್ ಸಂಸ್ಥೆಯ ಬಂಟ್ವಾಳ ಪ್ರತಿನಿಧಿ ವಿನೋದ್ ಹಾಗೂ ಒಕ್ಕೂಟ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ವಿಭಾಗದ ಸೇವಾ ಪ್ರತಿನಿಧಿ ಲಕ್ಷ್ಮೀ ಸ್ವಾಗತಿಸಿ,ವಲಯ ಮೇಲ್ವಿಚಾರಕಿ ಅಮಿತ ಕಾರ್ಯಕ್ರಮ ನಿರೂಪಿಸಿದರು.