ಬಂಟ್ವಾಳ: ರಾಷ್ಟ್ರದಾದ್ಯಂತ ಅ. ೨ ರಿಂದ ೮‌ ರ ತನಕ ಆಚರಿಸಲ್ಪಡುವ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಪ್ರಯುಕ್ತ ಶುಕ್ರವಾರ ಕಲ್ಲಡ್ಕ‌ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಅವರು ದೀಪ ಬೆಳಗಿಸಿ ಸಪ್ತಾಹವನ್ನು ಉದ್ಘಾಟಿಸಿದರು.ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್ ಅವರು ವನ್ಯಜೀವಿ ಸಂರಕ್ಷಣೆ ಕುರಿತು ಕೈಗೊಂಡ ಕಾರ್ಯ ಸ್ಮರಣೀಯವಾಗಿದೆ,  ಕಾಡಿನ ನಾಶದಿಂದಾಗಿ,ವನ್ಯಜೀವಿಗಳ ಆವಾಸಸ್ಥಾನ ವಿನಾಶದ ಅಂಚಿನಲ್ಲಿದೆ,ಅನೇಕ ಪ್ರಾಣಿ ವೈವಿಧ್ಯಗಳನ್ನು ಹಾಗೂ  ಅಳಿವಿನಂಚಿನಲ್ಲಿರುವ ಜೀವಿಗಳನ್ನು ಸಂರಕ್ಷಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.

ಈ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ,ಕವನ ರಚನೆ,ಚರ್ಚಾ ಸ್ಪರ್ಧೆಯನ್ನು ನಡೆಸಲಾಯಿತು.ಸ್ಪರ್ಧೆಯನ್ನು ಮಾಲತಿ,ಪ್ರೀತಾ ನಿರ್ವಹಿಸಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಪಿ.ಕೆ ಪದ್ಮನಾಭ,ಅಧ್ಯಾಪಕರರಾದ ಸುಮಂತ್ ಆಳ್ವ ಎಂ,ವೇದಾವತಿ,ರಾಜೇಶ್ವರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *