“ಸ್ವಚ್ಛ ಎಳ್ಳಾರೆ” ಬ್ರಹತ್ ಸ್ವಚ್ಛತಾ ಅಭಿಯಾನ
ಬಂಟ್ವಾಳ: ಜನಜಾಗೃತಿ ವೇದಿಕೆ ಮುದ್ರಾಡಿ ವಲಯದ ಅಧ್ಯಕ್ಷ ದೇವೇಂದ್ರ ಕಾಮತ್ ಎಳ್ಳಾರೆ ನೇತೃತ್ವದಲ್ಲಿ “ಸ್ವಚ್ಛ ಎಳ್ಳಾರೆ” ಬ್ರಹತ್ ಸ್ವಚ್ಛತಾ ಅಭಿಯಾನ ನಡೆಯಿತು.

ಎಳ್ಳಾರೆ ಗ್ರಾಮದ ಬುದ್ಧಾಯುರ್ವೇದ ವನದೇಗುಲ,ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ,ದೇವಸ್ಥಾನಬೆಟ್ಟು ಅಂಗನವಾಡಿ ಕೇಂದ್ರ,ಶ್ರೀ ಜನಾರ್ದನ ಶಾಲೆ,ಜಕ್ಕಲ್ ಪಾದೆಯ ಮದಗ,ಕಡಂಬಳ್ಳಿ ಅರ್ಬಿ ಸೇತುವೆ,ಕನ್ನಡಿಕಂಬ್ಳ ರಸ್ತೆ ಹೀಗೆ ವಿವಿಧ ಕಡೆಗಳಲ್ಲಿ ಗ್ರಾಮದ ಸಂಘ ಸಂಸ್ಥೆಗಳ ಸುಮಾರು ೧೫೦ ಕ್ಕೂ ಹೆಚ್ಚು ಸದಸ್ಯರು ಸ್ವಚ್ಚತೆಯಲ್ಲಿ ಭಾಗವಹಿಸಿದರು.
