ಬಂಟ್ವಾಳ ಪುರಸಭಾ ವ್ಯಾಪ್ತಿಯ ವಿವಿಧೆಡೆ ಸ್ವಚ್ಚತಾ ಕಾರ್ಯ
ಬಂಟ್ವಾಳ: “ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮದ ಪ್ರಯುಕ್ತ ಬಂಟ್ವಾಳ ಪುರಸಭಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ,ಪುರಸಭಾ ಸದಸ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಫೋಟೋಗ್ರಾಫರ್ಸ್ ಅಸೋಸಿಯೇಷನ್,ಲಯನ್ಸ್ ಕ್ಲಬ್,ರೋಟರಿ ಕ್ಲಬ್,ನಾಗರಿಕ ಕ್ರಿಯಾ ಸಮಿತಿ ಪದಾಧಿಕಾರಿಗಳು,ಕಾರ್ಮೆಲ್ ಪದವಿ ಕಾಲೇಜಿನ ವಿದ್ಯಾರ್ಥಿಗಳು,ಪ್ರಾಧ್ಯಾಪಕರು,ಪ್ರಾಂಶುಪಾಲರು,ಪುರಸಭಾ ಸದಸ್ಯರು ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಸ್ವಚ್ಛತಾ ರಾಯಭಾರಿ ಸಂದೀಪ್ ಭಾಗವಹಿಸಿದ್ದರು.
ಬಿ. ಕಸಬಾ ಗ್ರಾಮದ ಪಂಜೆ ಮಂಗೇಶರಾಯ ಸ್ಮಾರಕ,ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ ಪರಿಸರ,ಬಿ.ಮೂಡ ಗ್ರಾಮದ ಜೋಡುಮಾರ್ಗ ಉದ್ಯಾನವನ,ರೈಲ್ವೇನಿಲ್ದಾಣ,ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆ,ಸಂಚಯಗಿರಿ ಬಡಾವಣೆ,ಬಿ.ಸಿ.ರೋಡ್ ಬಸ್ ನಿಲ್ದಾಣ,ಇನ್ಫೆಂಟ್ ಜೀಸಸ್ ಚರ್ಚ್ ಬಳಿ ಮತ್ತು ಪಾಣೆ ಮಂಗಳೂರು ಗ್ರಾಮದ ಮಾರುಕಟ್ಟೆ,ಭಂಡಾರಿ ಬೆಟ್ಟುವಿನಿಂದ ನೆರೆ ವಿಮೋಚನಾ ರಸ್ತೆ,ನೋಂದಣಿ ಇಲಾಖೆಯ ಹಳೆ ಕಚೇರಿ ಬಳಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.