ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರ
ಬಂಟ್ವಾಳ : ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರಿಗೆ ಅಜೀಂ ಪ್ರೇಮ್ ಜೀ ಫೌಂಡೇಶನ್ ಮೂಲಕ ತರಬೇತಿ ಕಾರ್ಯಾಗಾರವು ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿಎಸ್ ಆರ್ ವೈ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಕಾರ್ಯಾಗಾರವನ್ನು ಬಂಟ್ವಾಳ ತಾ.ಪಂ.ನ ಸಹಾಯಕ ನಿರ್ದೇಶಕರಾದ ದಿನೇಶ್ ಎಂ. (ಗ್ರಾ.ಉ)ಅವರು ಉದ್ಘಾಟಿಸಿ ತರಬೇತಿ ಪಡೆದ ಮೇಲ್ವಿಚಾರಕರು ಉತ್ತಮ ರೀತಿಯಲ್ಲಿ ಗ್ರಂಥಾಲಯದ ಕಾರ್ಯ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ತಾ.ಪಂ. ವ್ಯವಸ್ಥಾಪಕಿ ಶಾಂಭವಿ ಎಸ್.,ಸಂಪನ್ಮೂಲ ವ್ಯಕ್ತಿಗಳಾದ ಪದ್ಮಾ,ಸೌಮ್ಯಶ್ರೀ ಮತ್ತು ಮಧು ಉಪಸ್ಥಿತರಿದ್ದರು.ಅಶೋಕ್ ಕುಮಾರ್ ಬರಿಮಾರು ಕಾರ್ಯಕ್ರಮ ನಿರೂಪಿಸಿದರು.