ಕಾರ್ಮಿಕರ ಸೌಲಭ್ಯಗಳಲ್ಲಿ ಕಡಿತ ; ಬಿಎಂಎಸ್ ಬಂಟ್ವಾಳ ಘಟಕ ಖಂಡನೆ
ಬಂಟ್ವಾಳ: ಕಟ್ಟಡ ಮತ್ತು ಇತರ ನಿರ್ಮಣ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿರುವ “ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ” ಯಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ.
ಈ ಕುರಿತು ಹಲವು ಬಾರಿ ಮಂಡಳಿಯ ಉನ್ನತ ಅಧಿಕಾರಿಗಳು,ಕಾರ್ಮಿಕ ಸಚಿವರನ್ನು ಭೇಟಿಯಾಗಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದ್ದರೂ ಈ ವರೆಗೂ ಈಡೇರಿರುವುದಿಲ್ಲ, ಇದೀಗ ಕಾರ್ಮಿಕರ ಸೌಲಭ್ಯಗಳಲ್ಲಿ ಕಡಿತ ಮಾಡಲು ಮಂಡಳಿಯು ಮುಂದಾಗಿರವುದನ್ನು ಭಾರತೀಯ ಮಜ್ದೂರು ಸಂಘದ ಬಂಟ್ವಾಳ ಘಟಕ ಖಂಡಿಸಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಏಕಪಕ್ಷೀಯ ನಿರ್ಧಾರಕೈಗೊಂಡು ಕಾರ್ಮಿಕರ ಮದುವೆ,ಅಪಘಾತ,ಸಹಜ ಮರಣ,ವೃದ್ದಾಪ್ಯ ವೇತನ,ಪಿಂಚಣಿ,ಸ್ಕಾಲರ್ ಶಿಪ್ ಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿರುವುದನ್ನು ಆಕ್ಷೇಪಿಸಿರುವ ಬಿಎಂಎಸ್ ಬಂಟ್ವಾಳ ಘಟಕ ಇದನ್ನು ಈ ಹಿಂದಿನಂತೆಯೇ ಶೀಘ್ರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯ ಮೂಲಕ ಒತ್ತಾಯಿಸಿದೆ.
ಭಾರತ ದೇಶದಲ್ಲಿ ಒಟ್ಟು 10 ರಾಷ್ಟ್ರೀಯ ಮಟ್ಟದ ಟ್ರೇಡ್ ಯೂನಿಯನ್ ಗಳಿದ್ದು,ಕರ್ನಾಟಕ ಸರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕೇವಲ ಒಂದು ಕಾರ್ಮಿಕರ ಸಂಘಟನೆಯನ್ನು ಹೊರತು ಪಡಿಸಿ ಉಳಿದ ಎಲ್ಲ ಯೂನಿಯನ್ ಗಳನ್ನು ಕಡೆಗಣಿಸಿರುತ್ತದೆ.
ಕಾರ್ಮಿಕರ ಸಮಸ್ಯೆಯ ಅರಿವಿಲ್ಲದವರನ್ನು ಈ ಮಂಡಳಿಯಲ್ಲಿ ಸದಸ್ಯರನ್ನಾಗಿಸಲಾಗಿದೆ ಇದು ಕಾರ್ಮಿಕರಿಗೆ ಮಾಡಲಾದ ಅನ್ಯಾಯ ಎಂದು ಬಿಎಂಎಸ್ ಬಂಟ್ವಾಳ ಘಟಕ ತಿಳಿಸಿದೆ.
ಭಾರತೀಯ ಮಜ್ದೂರು ಸಂಘ ನವ ದೇಶದಲ್ಲಿ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾಗಿದ್ದು,ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ಸದಸ್ಯತ್ವ ನೀಡಬೇಕೆಂದು ಒತ್ತಾಯಿಸಿದೆ.