ಬಂಟ್ವಾಳ: ಗಣೇಶೋತ್ಸವ ಸಂಪನ್ನ
ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಆರಾಧಿಸಲ್ಪಟ್ಟ ಶ್ರೀಗಣೇಶನ ಮೆರವಣಿಗೆಯು ಗುರುವಾರ ರಾತ್ರಿ ಬಂಟ್ವಾಳ ಪೇಟೆಯಲ್ಲಿ ನಡೆಯಿತು.
ಉತ್ಸವ ಸ್ಥಳದಿಂದ ಹೊರಟ ಶ್ರೀಗಣೇಶನ ವಿಗ್ರಹದ ಮೆರವಣಿಗೆ ರಥಬೀದಿಯಲ್ಲಿ ಸಾಗಿ,ಮಾರ್ಕೆಟ್ ರಸ್ತೆಯ ಮೂಲಕ ಹನುಮಾನ್ ದೇವಸ್ಥಾನದ ವರೆಗೆ ತೆರಳಿ ಅಲ್ಲಿಂದ ವಾಪಾಸ್ ಅದೇ ದಾರಿಯಾಗಿ ಬಂದು ತ್ಯಾಗರಾಜ ರಸ್ತೆಯಲ್ಲಿ ತೆರಳಿ ದೇವಳದ ಮುಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.ಬೆಳ್ಳಿಯ ಪ್ರಭಾವಳಿಯನ್ನು ಹೊಂದಿದ್ದ ಶ್ರೀಗಣೇಶನ ವಿಗ್ರಹವನ್ನು ಭಜಕರು ಹೆಗಲಲ್ಲಿಯೇ ಹೊತ್ತುಕೊಂಡು ಮೆರವಣಿಗೆಯುದ್ದಕ್ಕು ತೆರಳಿದ್ದು ವಿಶೇಷವಾಗಿತ್ತು.