Published On: Fri, Sep 22nd, 2023

ಫರಂಗಿಪೇಟೆ ರಾ.ಹೆ.ಯಲ್ಲಿ ಶ್ರೀಗಣೇಶನ‌ ವೈಭವಯುತವಾದ ಶೋಭಾಯಾತ್ರೆ ಕಣ್ತುಂಬಿಕೊಂಡ ಭಕ್ತ ಸಮೂಹ

ಬಂಟ್ವಾಳ: ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಫರಂಗಿಪೇಟೆಯ‌ ಸೇವಾಂಜಲಿ‌ ಸಭಾಂಗಣದಲ್ಲಿ‌ ಮೂರು ದಿನಗಳ‌ ಕಾಲ ಆರಾಧಿಸಲ್ಪಟ್ಟ 41 ನೇ ವರ್ಷದ ಸಾರ್ವಜನಿಕ ಶ್ರಿಗಣೇಶನ ಶೋಭಾಯಾತ್ರೆಯು ಗುರುವಾರ ಸಂಜೆ‌ ವೈಭವಯುತವಾಗಿ ರಾ.ಹೆ.ಯ ರಾಜಾರಸ್ತೆಯಲ್ಲಿ ನಡೆಯಿತು.

ಉತ್ಸವ ಸ್ಥಳದಿಂದ ಹೊರಟ ಶ್ರೀಗಣೇಶನ ವಿಗ್ರಹದ ಶೋಭಾಯಾತ್ರೆಯು‌ ರಾ.ಹೆ.ಯಲ್ಲಿ ಮಾರಿಪಳ್ಳ,ಕಡೇಗೋಳಿಯವರೆಗೆ ಸಾಗಿ ಅಲ್ಲಿಂದ ತಿರುಗಿ ವಾಪಾಸ್ ಅದೇ ದಾರಿಯಾಗಿ ಬಂದು ಅರ್ಕುಳ ನೇತ್ರಾವತಿ ನದಿಯಲ್ಲಿ‌ ಜಲಸ್ತಂಭನಗೊಳಿಸಲಾಯಿತು.

ಭಜನೆ,ಶಂಖ,ಜಾಗಟೆ,ಸ್ಯಾಕ್ಸೋಫೋನ್,ಬ್ಯಾಂಡ್,ಚಂಡೆ,ಕೊಂಬು,ಕೀಲು ಕುದುರೆ,ಗೊಂಬೆಕುಣಿತ ವಿವಿಧ ಸಂಘ ಸಂಸ್ಥೆಗಳ‌ ಟ್ಯಾಬ್ಲೋ,ಸ್ತಬ್ದಚಿತ್ರಗಳು ಶೋಭಾಯಾತ್ರೆಗೆ ವಿಶೇಷ ಮೆರಗು‌ನೀಡಿತು.ರಸ್ತೆಯುದ್ದಕ್ಕು ಸಾವಿರಾರು ಭಕ್ತರು ನಿಂತು ಶ್ರೀಗಣೇಶನ ಶೋಭಾಯಾತ್ರೆಯನ್ನು‌ ಕಣ್ತುಂಬಿಕೊಂಡರು.

ಬೆಳಗ್ಗೆ 108 ತೆಂಗಿನಕಾಯಿ ಗಣಯಾಗ, ಭಜನೆ,ಮಧ್ಯಾಹ್ನ ಮಹಾಪೂಜೆ ನಡೆಯಿತು.ಸೇವಾಂಜಲಿ‌ ಪ್ರತಿಪ್ಠಾನ,ಶ್ರೀ ಗಣೇಶೋತ್ಸವ ಸಮಿತಿ‌ ಪದಾಧಿಕಾರಿಗಳು,ಸದಸ್ಯರು‌ ಹಾಜರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter