ಮಂಜಲ್ಪಾದೆ: ಗಣೇಶ್ ಚತುರ್ಥಿ ಪ್ರಯುಕ್ತ ವಿವಿಧ ಸ್ಪರ್ಧೆ
ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಶಾರದಾ ಶಾಖೆ ಇದರ ಆಶಯದಲ್ಲಿ ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ 11ನೇ ವರ್ಷದ ಗಣೇಶ ಚತುರ್ಥಿ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ವಹಿಸಿ ಮಾತನಾಡಿ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ಅವರು ಗಣೇಶ ಚತುರ್ಥಿ ದಿನವನ್ನು ಸಾಮೂಹಿಕವಾಗಿ ಹಬ್ಬಗಳನ್ನು ಆಚರಿಸುವ ಪದ್ಧತಿಯನ್ನು ಬೆಳೆಸಿ ಈ ತನಕ ಉಳಿಸಿಕೊಂಡು ಬರಲಾಗಿದೆ ತನ್ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಪರ್ಧೆಯ ವಿಜೇತರಿಗೆ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.ಸ್ಥಳೀಯ ಪ್ರಮುಖರಾದ ತಿಮ್ಮಪ್ಪಗಟ್ಟಿ,ವಿಶ್ವನಾಥ ಪೂಜಾರಿ,ದಿನೇಶ್ ಮಯ್ಯ,ಅವಿನಾಶ್,ರಾಕೇಶ್,ಪುರುಷೋತ್ತಮಗಟ್ಟಿ,ಶ್ರೀನಿವಾಸ ಮಯ್ಯ,ಗಣೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.