ಕಲಾಶ್ರೀ ಮತ್ತು ಕಮಲಪತ್ರ ಪ್ರಶಸ್ತಿ ಪ್ರಧಾನ
ಬಂಟ್ವಾಳ: ಸಮಾಜ ಸೇವಾ ಸಂಸ್ಥೆಗಳಲ್ಲಿ ಯುವ ಜನತೆಯನ್ನು ತರಬೇತುಗೊಳಿಸಿ ಅವರನ್ನು ಸಂಪನ್ಮೂಲ ವ್ಯಕ್ತಿ ಗಳನ್ನಾಗಿ ರೂಪಿಸುವ ಮಹತ್ತರ ಕೆಲಸವನ್ನು ಜೇಸಿ ಮಾಡುತ್ತಿದೆ.ಇಲ್ಲಿ ತರಬೇತಿ ಪಡೆದ ವ್ಯಕ್ತಿಗಳು ರೋಟರಿಯಂತಹ ಸಂಸ್ಥೆಗಳಲ್ಲಿ ಯಶಸ್ವಿ ನಾಯಕರಾಗುತ್ತಾರೆ.ಜೇಸಿಐ ಜೋಡುಮಾರ್ಗ ವು ಅನೇಕ ಸಮಾಜಮುಖಿ ಕೆಲಸಗಳ ಮೂಲಕ ಈ ಪರಿಸರದಲ್ಲಿ ತನ್ನ ಛಾಪನ್ನು ಮೂಡಿಸಿದೆ ಎಂದು ಮೇಜರ್ ಡೋನರ್ ರೋ.ಮಂಜುನಾಥ ಆಚಾರ್ಯ ಹೇಳಿದರು.

ಜೇಸಿಐ ಜೋಡುಮಾರ್ಗ ನೇತ್ರಾವತಿ ಘಟಕವು ಆಯೋಜಿಸಿದ್ದ ಜೇಸಿ ಸಪ್ತಾಹ ಜೈತ್ರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಭಾರತೀಯ ಲಲಿತಕಲೆಗಳ ಅಧ್ಯಯನ,ಅಧ್ಯಾಪನ ನಡೆಸಿರುವ ಪ್ರತಿಭಾನ್ವಿತೆ ಕುಮಾರಿ ವಸುಧಾ ಜಿ.ಎನ್. ಬೋಳಂತೂರು ಇವರಿಗೆ “ಕಲಾಶ್ರೀ “ಮತ್ತು ಜೇಸಿ ಸಂಸ್ಥೆಯಲ್ಲಿ ನೀಡಿದ ಸೇವೆಗಾಗಿ ಶ್ರೀನಿಧಿ ಭಟ್ ಅವರಿಗೆ ಜೇಸಿ “ಕಮಲಪತ್ರ” ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷೆ ಜೆಎಫ್ ಡಿ ಗಾಯತ್ರಿ ಲೋಕೇಶ್ ವಹಿಸಿದ್ದರು.ಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್,ಜೇಜೆಸಿ ಅಧ್ಯಕ್ಷೆ ರಶ್ಮಿತಾ,ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಪೈ,ಘಟಕದ ಪೂರ್ವಾಧ್ಯಕ್ಷರುಗಳು,ಜೇಸಿ ಸದಸ್ಯರು ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯದರ್ಶಿ ರಮ್ಯ ವಿನಾಯಕ್ ವಂದಿಸಿದರು.ಸಪ್ತಾಹ ಅಂಗವಾಗಿ ನೃತ್ಯ ವೈವಿಧ್ಯ ಸ್ಪರ್ಧೆ ನಡೆಯಿತು.ರವೀಂದ್ರ ಕುಕ್ಕಾಜೆ ಸ್ಪರ್ಧಾ ಕಾರ್ಯಕ್ರಮ ನಿರ್ವಹಿಸಿದರು.