ಸನಾತನ ಧರ್ಮ ಸಕಲರನ್ನು ಗೌರವಿಸುವ ಧರ್ಮ: ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ
ಬಂಟ್ವಾಳ: ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯ ದಲ್ಲಿ ನಡೆದ ೪೧ ನೇ ವರ್ಷದ ಗಣೇಶೋತ್ಸವ ಕ್ಕೆ ಚಾಲನೆ ನೀಡಿ ಸನಾತನ ಧರ್ಮ ಪ್ರಕೃತಿಯನ್ನು ಆರಾಧಿಸುವ ಜತೆಗೆ ಸಕಲರನ್ನು ಗೌರವಿಸುವ ಧರ್ಮ,ಪ್ರತಿ ಹಬ್ಬ ಮತ್ತು ಆಚರಣೆಗಳಲ್ಲಿ ವಿಶೇಷ ಅರ್ಥ ವಿರುತ್ತದೆ ಎಂದು ಆಶೀರ್ವಚನದಲ್ಲಿ ನುಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ ಸತೀಶ್ ಭಂಡಾರಿ ಧ್ವಜಾರೋಹಣ ಗೈದರು.ಮನಸ್ವಿನಿ ಆಸ್ಪತ್ರೆಯ ಮನೋವೈದ್ಯರಾದ ಡಾ ರವೀಶ್ ತುಂಗಾ,ಶ್ರೀ ಕ್ಷೇತ್ರ ಪುತ್ತಿಗೆ ಮಹತೋಬಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಕುಲದೀಪ ಚೌಟ ಅರಮನೆ,ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ ಪೂಂಜಾ,ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೋಶಾಧಿಕಾರಿ ಕೆ.ರವೀಂದ್ರ ಕಂಬಳಿ,ಉತ್ಸವ ಸಮಿತಿ ಅಧ್ಯಕ್ಷ ಕೇಶವ ದೋಟ ಮೇರಮಜಲು,ಕಾರ್ಯದರ್ಶಿ ದಿನೇಶ್ ತುಂಬೆ,ಹಿರಿಯರಾದ ದಾಮೋದರ ಶೆಣೈ ಉಪಸ್ಥಿತರಿದ್ದರು.
ಇದೇ ವೇಳೆ ಸೇವಾಂಜಲಿ ಸಭಾಂಗಣದಲ್ಲಿ ನೂತನ ವಾಗಿ ನಿರ್ಮಿಸಲಾದ ಭೋಜನ ಶಾಲೆಯ ಕಟ್ಟಡದ ಇಂಜಿನಿಯರ್ ಅರ್ಜುನ್ ಪೂಂಜಾರವರನ್ನು ಸನ್ಮಾನಿಸಲಾಯಿತು.
ತಾರಾನಾಥ ಕೊಟ್ಟಾರಿ ಸ್ವಾಗತಿಸಿ,ದೇವದಾಸ್ ಶೆಟ್ಟಿ ಕೊಡ್ಮನ್ ವಂದಿಸಿದರು.