ರಾಜ್ಯಮಟ್ಟದ ಥಾಂಗ ತಾ (ಮಣಿಪುರ ಕಳರಿ ಫೈಟ್) ಕ್ರೀಡಾ ಕೂಟದಲ್ಲಿ ಚಿನ್ನ ಗೆದ್ದ ಬಂಟ್ವಾಳದ ಸ್ಪರ್ಧಿಗಳು
ಬಂಟ್ವಾಳ: ವಿಜಯಪುರ ಜಿಲ್ಲಾ ಥಾಂಗ ತಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕನೆಯ ರಾಜ್ಯಮಟ್ಟದ ಥಾಂಗ ತಾ (ಮಣಿಪುರ ಕಳರಿ ಫೈಟ್) ಕ್ರೀಡಾ ಕೂಟದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆ ಹಾಗೂ ಪೊಳಲಿ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಪದಕ ಗೆದ್ದುಕೊಂಡಿದ್ದಾರೆ.
ಪೊಳಲಿ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿರುವ ಗೀತಾ,ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಶಶಿರಾಜ್, ಹಾಗೂ ಯತೀಶ್,ಆಳ್ವಾಸ್ ನ ತನ್ಮಯಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಶೀರಾಮ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಆಶಿಶ್,ಪೊಳಲಿ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿರುವ ಪೊಳಲಿ ಸರಕಾರಿ ಪ್ರೌಢ ಶಾಲೆಯ ಸಂದೀಪ್,ಸಾತ್ವಿಕ,ಜತೀನ್,ಚೇತನ್,ವಿದ್ಯಾವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಭಿರಾಮಕಷ್ಣ ರಾವ್ ಕಂಚಿನ ಪದಕ ಗೆದ್ದು ಕೊಂಡಿದ್ದಾರೆ.
ಇವರಿಗೆ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ತರಬೇತಿ ನೀಡುತ್ತಿದ್ದು ರಾಷ್ಟಮಟ್ಟದ ಸ್ಪರ್ಧೆ ಜಾರ್ಕಾಂಡ್ ನಲ್ಲಿ ನಡೆಯಲಿದೆ.ಥಾಂಗ್ ತಾ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯ ಸ್ಪರ್ಧಿಗಳು ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.