ಫರಂಗಿಪೇಟೆ: ಶ್ರೀ ರಾಮ ಶಾಲೆಯಲ್ಲಿ ಮಾಹಿತಿ ಕಾರ್ಯಾಗಾರ
ಬಂಟ್ವಾಳ: ಫರಂಗಿಪೇಟೆ ರೋಟರಿ ಕ್ಲಬ್ ಇದರ ವತಿಯಿಂದ ಪಿಎಂಎಫ್ ಎಂಇ ಯೋಜನೆಯಲ್ಲಿ ಫರಂಗಿಪೇಟೆ ಶ್ರೀ ರಾಮ ಶಾಲೆಯಲ್ಲಿ ಮಾಹಿತಿ ನೀಡುವ ಕಾರ್ಯಾಗಾರವನ್ನು ಶ್ರೀ ರಾಮ ಶಾಲೆಯ ಸಂಚಾಲಕರಾದ ಗೋವಿಂದ ಶೆಣೈಯವರು ಉದ್ಘಾಟಿಸಿದರು.

ಫರಂಗಿಪೇಟೆ ರೋಟರಿ ಕ್ಲಬ್ ನ ಅಧ್ಯಕ್ಷ ರೊ.ಸಂಕಪ್ಪ ಶೆಟ್ಟಿ ಉಜಾರ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ.ಎ.ಎ.ಫಝಲ್ ರವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಖಜಾಂಚಿ ರೊ.ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ರೊ.ಹರಿಶ್ಚಂದ್ರ ಆಳ್ವ ವಂದಿಸಿದರು.ರೊ. ರಮೇಶ್ ತುಂಬೆ, ರೋ.ಸುರೇಂದ್ರ ಕಂಬ್ಳಿ, ರೊ.ರಮೇಶ್ ಶೆಟ್ಟಿ ನಡಿಗುತ್ತು, ರೊ.ಹೇಮಾ ಭಂಡಾರಿ ಮೊದಲಾದವರು ಹಾಜರಿದ್ದರು.