ವಿಶ್ವೇಶ್ವರಯ್ಯನವರ ಬದುಕೇ ಒಂದು ಪಾಠ: ಕಾದಂಬರಿಕಾರ ವಿವೇಕಾನಂದ ಕಾಮತ್
ಮಂಗಳೂರು: ವಿಶ್ವೇಶ್ವರಯ್ಯನವರ ಬದುಕೇ ಒಂದು ಪಾಠ ಅವರ ಬದ್ಧತೆ, ಕರ್ತವ್ಯ ಶಕ್ತಿ, ಛಲ ಈ ಎಲ್ಲಾ ಗುಣಗಳು ನಮ್ಮನ್ನು ಅವರಿಸಿಕೊಳ್ಳಬೇಕು ,ಅದು ನಮಗೆ ದಾರಿದೀಪವಾಗಬೇಕೆಂದು ಕಾದಂಬರಿಕಾರ ವಿವೇಕಾನಂದ ಕಾಮತ್ ಹೇಳಿದರು.
ಅವರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಸರ್ ಎಂ ವಿಶ್ವೇಶ್ವರಯ್ಯರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸರ್ ಎಂ ವಿಶ್ವೇಶ್ವರಯ್ಯ ನವರ ಬದುಕು ಮತ್ತು ಸಾಧನೆಯ ಕುರಿತು ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಸರ್ ಎಂ ವಿಶ್ವೇಶ್ವರಯ್ಯನವರ ಜೀವನ ಸಾಧನೆಯ ಔಚಿತ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಕ.ಸಾ.ಪ ಬೆಂಗಳೂರು ಕೇಂದ್ರೀಯ ಕಾರ್ಯಕಾರಿ ಸಮಿತಿಯ ಡಾ. ಮಾಧವ ಎಂ.ಕೆ ರವರು ಸರ್. ಎಂ.ವಿಶ್ವೇಶ್ವರಯ್ಯ ರವರ ಸಾಧನೆ ಎಲ್ಲರಿಗೂ ಮಾರ್ಗದರ್ಶಕ ಎಂದರು.
ಕಾಲೇಜಿನ ಸಂಚಾಲಕರಾದ ವಸಂತ ಕಾರಂದೂರ್ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ಬದುಕಿಗೆ ಅತೀ ಮುಖ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾಲತಾ ಎಸ್ ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.
ಕನ್ನಡ ಉಪನ್ಯಾಸಕ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕರಾದ ಯತೀನ್ ಸ್ವಾಗತಿಸಿದರು. ಕನ್ನಡ ಸಂಘದ ನಾಯಕ ರಾಜೇಶ್ ವಂದಿಸಿದರು.