ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಹಿತ ವಿವಿಧ ೧೪ ಸಂಘಗಳ ಉದ್ಘಾಟನೆ
ಬಂಟ್ವಾಳ:ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಪ್ರಣವ ವಿದ್ಯಾರ್ಥಿ ಸಂಘ ಹಾಗೂ ವಿವಿಧ ೧೪ ಸಂಘಗಳ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು. ಪುತ್ತೂರಿನ ಯಮುನಾ ಬೋರ್‌ವೆಲ್ಸ್ ನ ಮಾಲಕರಾದ ಕು. ಕಾವ್ಯ ಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಸಂಘದ ಚುನಾವಣೆಯು ವಿದ್ಯಾರ್ಥಿ ಜೀವನದಲ್ಲಿ ಮತದಾನದ ಅನುಭವ ಪಡೆಯಲಿರುವ ಉತ್ತಮ ಅವಕಾಶ. ಇಲ್ಲಿ ಅಧಿಕಾರ ಪಡೆದವರು ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ತಮ್ಮ ಬೆಳವಣಿಗೆ ಕಾಣಬೇಕು ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಕಲಿಯುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಹರೀಶ್ ಮಾಂಬಾಡಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಶುಭಹಾರೈಸಿದರು. ವೇದಿಕೆಯಲ್ಲಿ ಕಲ್ಲಡ್ಕ ಫಾರ್ಚುನ್ ಹಾರ್ಡ್ವೇರ್ ಮಾಲಕ ಧೀರಜ್ ಬಲ್ಲೆಕೋಡಿ, ಬಾಳ್ತಿಲ ಗ್ರಾಮಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ, ಉಪಾಧ್ಯಕ್ಷೆ ರಂಜಿನಿ ಎಸ್,ಗೋಳ್ತಮಜಲು ಗ್ರಾಮಪಂಚಾಯತ್ ಉಪಾಧ್ಯಕ್ಷ ಜಯಂತ್ ಮಕ್ಕಾರು, ವಕೀಲರು, ಹಿರಿಯ ವಿದ್ಯಾರ್ಥಿ ಶ್ರೀರಾಮ್ ಪ್ರಭು ಉಪಸ್ಥಿತರಿದ್ದರು.
ಉಪನ್ಯಾಸಕ ಗಂಧರ್ವ ಮತದಾನದ ವರದಿ ವಾಚಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಅವರು ವಿವಿಧ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ತರಗತಿ ಪ್ರತಿನಿಧಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು.
ವಿದ್ಯಾರ್ಥಿನಿಯರಾದ ಕು.ಪುನೀತಾ ನಿರೂಪಿಸಿ, ಕು. ಧನ್ಯಶ್ರೀ ಸ್ವಾಗತಿಸಿ, ಕು. ಪಲ್ಲವಿ ವಂದಿಸಿ, ಕು. ಶರಣ್ಯಶ್ರೀ ವೈಯಕ್ತಿಕ ಗೀತೆ ಹಾಡಿದರು.