ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಬಂಟ್ವಾಳ: ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 2,98,625.80 ರೂ. ನಿವ್ವಳ ಲಾಭ ಗಳಿಸಿದ್ದು,ಸದಸ್ಯರಿಗೆ 13 ಶೇ. ಡಿವಿಡೆಂಡ್ ಹಾಗೂ 65 ಶೇ. ಬೋನಸ್ ನ್ನು ಸಂಘದ ಅಧ್ಯಕ್ಷ ಸಿ.ಎಚ್.ನಾರಾಯಣ ಭಟ್ ಅವರು ಘೋಷಿಸಿದರು.
ಮಾಣಿ ಕುಲಾಲ ಸಂಘದ ಸಭಾಭವನದಲ್ಲಿ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 15 ವರ್ಷಗಳಿಂದ ಸಂಘ ನಿರಂತರವಾಗಿ ‘ಎ’ ಶ್ರೇಣಿಯಲ್ಲಿದೆ ಎಂದರು.
ಸಂಘವು 54200.00 ಪಾಲು ಬಂಡವಾಳವನ್ನು ಹೊಂದಿದೆ, ಸದಸ್ಯರಿಂದ 240436.00. ಲೀ ಹಾಲು ಖರೀದಿ ಮಾಡಿದ್ದು,ಇದರಲ್ಲಿ 25202.90 ಲೀ ಹಾಲನ್ನು 1058521.80 ರೂ.ವಿಗೆ ಮಾರಾಟ ಮಾಡಿದರೆ 7230785.72 ರೂ. ಬೆಲೆಯ ಹಾಲನ್ನು ಡೈರಿಗೆ ಮಾರಾಟ ಮಾಡಲಾಗಿದೆಯಲ್ಲದೆ ಸ್ಯಾಂಪಲ್ ಹಾಲು ಮಾರಾಟದಿಂದ 35259.00 ರೂ.ಜಮೆ ಯಾಗಿದೆ. 3014200.00 ರೂ.ವಿನ ಪಶು ಆಹಾರ ಮತ್ತು 122500.00 ರೂ.ವಿನ ಲವಣ ಮಿಶ್ರಣ ಮಾರಾಟ ಮಾಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸಂಘದ ಬೆಳವಣಿಗೆಯ ನಿಟ್ಟಿನಲ್ಲಿ ಡೈರಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ಕೆ.ಬಾಬು ಶೆಟ್ಟಿ, ನಿರ್ದೇಶಕರುಗಳಾದ ಕೆ.ಜನಾರ್ಧನ ಗೌಡ,ಕೆ.ನಾರಾಯಣ ಶೆಟ್ಟಿ,ಸದಾನಂದ ರೈ,ಜನಾರ್ಧನ ಪೆರಾಜೆ,ಶಿವಶಂಕರ ಭಟ್,ಚಂದ್ರಶೇಖರ ಕರ್ಕೇರ,ಎಮ್.ಕೃಷ್ಣ,ಪ್ರಪುಲ್ಲಾ ಆರ್.ರೈ,ಲಲಿತಾ ಎನ್ .ನಾಯ್ಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ 50 ವರ್ಷಗಳಿಂದ ಸಂಘಕ್ಕೆ ಹಾಲು ಪೂರೈಸುತ್ತಿರುವ ಹಿರಿಯ ಸದಸ್ಯರಾದ ಪ್ರಪುಲ್ಲಾ ಆರ್.ರೈ ಹಾಗೂ ಪದ್ಮನಾಭ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ವರ್ಷ ಅತೀ ಹೆಚ್ಚು ಹಾಲು ಪೂರೈಸಿದ ನಾರಾಯಣ ಶೆಟ್ಟಿ,ಜನಾರ್ಧನ ಪೆರಾಜೆ ಮತ್ತು ಯಶೋಧ ಪಾಲ್ಯ ಅವರನ್ನು ಅಭಿನಂದಿಸಲಾಯಿತು.
ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾ ಸುನಿಲ್ ಮಾಹಿತಿ ನೀಡಿದರು.ಪಶು ವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ ವಿಮೆಯ ಬಗ್ಗೆ ಮಾಹಿತಿ ನೀಡಿದರು.
ನಿರ್ದೇಶಕರಾದ ಜನಾರ್ಧನ ಪೆರಾಜೆ ಸ್ವಾಗತಿಸಿ,ಶಿವಶಂಕರ್ ಭಟ್ ವಂದಿಸಿದರು,ಸಂಘದ ಕಾರ್ಯದರ್ಶಿ ನಾಗೇಶ್ ವರದಿ ವಾಚಿಸಿದರು.