ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ದಿಂದ ಸನ್ಮಾನ
ಬಂಟ್ವಾಳ: ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು ಇದರ ೨೦೨೨-೨೩ನೇ ವಾರ್ಷಿಕ ಮಹಾಸಭೆಯಲ್ಲಿ ನರಿಕೊಂಬು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾದ ಸಂತೋಷ್ ಕುಮಾರ್ ಅಡ್ಡದಪಾದೆ ಹಾಗೂ ಬಿರುವೆರ್ ಸೇವಾ ಟ್ರಸ್ಟ್ ಇದರ ನೂತನ ಅಧ್ಯಕ್ಷರಾದ ಸೀತಾರಾಮ ಪೂಜಾರಿ ಬೋಳಂತೂರು ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶಕ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಸಂಘದ ಉಪಾಧ್ಯಕ್ಷ ಮಾಧವ ಕೆ.ಕರ್ಬೆಟ್ಟು, ನಿರ್ದೇಶಕರಾದ ಮೋನಪ್ಪ ಪೂಜಾರಿ ಬೊಂಡಾಲ, ಆಶೋಕ್ ಆರ್., ನಾರಾಯಣ ಪೂಜಾರಿ ಕೇದಿಗೆ, ಕೃಷ್ಣಪ್ಪ ಪೂಜಾರಿ ಬಾಳ್ತಿಲ, ವಿಜಯ ತುಕರಾಮ, ಜಯಂತಿ ಈಶ್ವರ ಪೂಜಾರಿ, ರಾಜೇಶ್ ಶೇಡಿಗುರಿ, ಬಿರುವೆರ್ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಹರೀಶ್ ಪೂಜಾರಿ ಮರ್ದೋಳಿ, ಕೋಶಾಧಿಕಾರಿ ಉಮೇಶ್ ನೆಲ್ಲಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಮನೋಜ್ ನಿರ್ಮಲ್, ಮಾಜಿ ಕಾರ್ಯದರ್ಶಿ ಸಂಜೀವ ಪೂಜಾರಿ ನಾಟಿ, ಗ್ರಾ.ಪಂ. ಸದಸ್ಯ ರವಿ ಅಂಚನ್ ಅಬೆರೊಟ್ಟು, ಹಿರಿಯ ಮೂರ್ತೆದಾರ ಸದಸ್ಯರಾದ ಚಂದು ಪೂಜಾರಿ ಕೇದಿಗೆ, ಮೋಹನ ಪೂಜಾರಿ ಬೊಂಡಾಲ, ಪದ್ಮನಾಭ ಬೋಳಂತ್ತೂರು, ಬಟ್ಯಪ್ಪ ಪೂಜಾರಿ ಬೋಳಂಗಡಿ, ಡೀಕಯ್ಯ ಪೂಜಾರಿ ನಾಟಿ, ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಅಮೀನ್, ಸಿಬ್ಬಂದಿ ಕೃತಿಕ್ಷಾ ಉಪಸ್ಥಿತರಿದ್ದರು.