ಕೈಕಂಬ ಚೌತಿ : ೪೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವ
ಕೈಕಂಬ: ೪೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವವು ಸೆ.೧೯ ಹಾಗೂ ೨೦ನೇ ಬುಧವಾರದಂದು ಕೈಕಂಬ ಶ್ರೀ ಮಂಜುನಾಥ ರೈಸ್‌ಮಿಲ್ಲ್ ಪ್ರಾಂಗಣದ ಶ್ರೀ ಗಣೇಶ ಮಂಟಪದಲ್ಲಿ ನಡೆಯಲಿದೆ.

ಸೆ.೧೯ರಂದು ಮಂಗಳವಾರ ಬೆಳಿಗ್ಗೆ ೭.೩೦ಯಿಂದ ಶ್ರೀ ಕಾಳಭೈರವ ಮಂಜುನಾಥೇಶ್ವರ ಭಜನಾ ಮಂಡಳಿ,ಮಳಲಿ-ಮಟ್ಟಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.೮.೪೫ಕ್ಕೆ ಕೈಕಂಬ ಶ್ರೀ ಮಂಜುನಾಥ ರೈಸ್‌ಮಿಲ್ಲ್ ಪ್ರಾಂಗಣದ ಶ್ರೀ ಗಣೇಶ ಮಂಟಪದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ,ಗಂಟೆ ೯.೩೦ರಿಂದ ವಿವಿಧ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ.೧೧:೦೦ ಗಂಟೆಗೆ ಗಣಹೋಮ,ಪಲ್ಲಪೂಜೆ,೧೨:೪೫ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ.
ಸಂಜೆ ಗಂಟೆ ೩:೦೦ಕ್ಕೆ ಸುಮತಿ ಮತ್ತು ವಿ.ಸಿ.ಶೇಖರ ಆಚಾರ್ಯ ಚರ್ಚ್ ರೋಡ್ ಕೈಕಂಬ ಪ್ರಾಯೋಜಕತ್ವದ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ “ಸ್ವರಾಭಿಷೇಕ”.
ಸಂಜೆ ೬:೦೦ಗಂಟೆಗೆ ಗತವೈಭವ ಕೂಟ ಮುಲ್ಕಿ ಕಲಾವಿದರಿಂದ “ಕಾರ್ನಿಕದ ಗತ ವೈಭವ” ಮಾಯೊಡು ಮೆರೆಯಿನ ಸತ್ಯೊಲ್ನ ಕತೆ ಪ್ರದರ್ಶನಗೊಳ್ಳಲಿದೆ.
ರಾತ್ರಿ ೯:೦೦ ಗಂಟೆಗೆ ರಂಗಪೂಜೆ-ದೀಪಾರಾಧನೆ,ಗಂಟೆ ೯:೪೫ಕ್ಕೆ ದೇವರಿಗೆ ಮಹಾಪೂಜೆ,ಅನ್ನಪ್ರಸಾದ ಸೇವೆ.ರಾತ್ರಿ ೧೦:೦೦ ಗಂಟೆಯಿಂದ ೧೨:೩೦ರ ವರೆಗೆ ಶ್ರೀ ಸುಬ್ರಮಣ್ಯೇಶ್ವರ ಕಲಾಕೇಂದ್ರ ತಕಧಿಮಿ ತಂಡ ಕೈಕಂಬ ಇದರ ವಿದ್ಯಾರ್ಥಿಗಳಿಂದ ಕಾಲಮಿತಿಯ ಯಕ್ಷಗಾನ “ಶ್ರೀನಿವಾಸ ಕಲ್ಯಾಣ” ನಡೆಯಲಿದೆ.
ಬುಧವಾರ ೨೦ರಂದು ಬೆಳಿಗ್ಗೆ ೭:೩೦ರಿಂದ ಭಜನಾ ತಂಡಗಳಿಂದ ಭಜನೆ,೯:೦೦ ಗಂಟೆಗೆ ಚಂದ್ರಶೇಖರ ಪೊಳಲಿ ಮತ್ತು ಬಳಗದವರಿಂದ ವಾದ್ಯಗೋಷ್ಠಿ,೯:೩೦ರಿಂದ ಕುಣಿತ ಭಜನೆ,ಗಂಟೆ ೧೦:೦೦ಕ್ಕೆ ಗಣಹೋಮ,೧೧:೦೦ಗಂಟೆಗೆ ಬೆನಕ ಭಜಕರು ಕೈಕಂಬ ಇವರ ಪ್ರಾಯೋಜಕತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಭಕ್ತಿ ಗಾನ ಸುಧೆ ಕಾರ್ಯಕ್ರಮ ನಡೆಯಲಿದೆ.ಗಂಟೆ ೧೨:೪೫ಕ್ಕೆ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಪ್ರಸಾದ ಸೇವೆ.
ಮದ್ಯಾಹ್ನ ೧:೩೦ರಿಂದ ದಾಮೋದರ ಜ್ಯುವೆಲ್ಲರ್ಸ್ ಕೈಕಂಬ ಪ್ರಾಯೋಜಕತ್ವದ ರಾಧಿಕಾ ಶೆಟ್ಟಿ ನೃತ್ಯಾಂಗನ್ ಮಂಗಳೂರು ಇವರ ಶಿಷ್ಯೆಯರಿಂದ “ನೃತ್ಯಾಂಜಲಿ” ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ ಗಂಟೆ ೩:೧೫ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ,ಕಾರ್ಯಕ್ರಮದಲ್ಲಿ ಶ್ರೀ ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ ಇಲ್ಲಿನ ಪ್ರಧಾನ ಅರ್ಚಕ ಮಹೇಶ್ ಭಟ್ ಆಶೀರ್ವಚನ ನೀಡಲಿದ್ದಾರೆ.ಕೆನರಾ ಬ್ಯಾಂಕ್ ಗುರುಪುರ ಕೈಕಂಬ ಹಿರಿಯ ಪ್ರಬಂದಕ ಮನೋಹರ್ ಕಾಮತ್ ಕೆ. ಇವರ ಅಧ್ಯಕ್ಷತೆಯಲ್ಲಿ,ಕೈಕಂಬ ಶ್ರೀ ಗಣೇಶೊತ್ಸವ ಸಮಿತಿಯ ಸ್ಥಾಪಕ ಸದಸ್ಯ ಸುಧಾಕರ ಮಾಧವ ಭಟ್ ರಾಮನಗರ ಕೈಕಂಬ,ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ನಾಯ್ಕ್ ಮೊಗರು,ಶ್ರೀ ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಏತಮೊಗರು ಗುತ್ತು ಸುಜಿತ್ ಆಳ್ವ,ಕಲ್ಲಾಡಿ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸುರೇಖಾ ಮುರಳೀಧರ್ ಎಡಪದವು ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಂಜೆ ೬:೦೦ ಗಂಟೆಯಿಂದ ಶ್ರೀ ವಿಘ್ನೇಶ್ವರ ದೇವರ ವೈಭವದ ಶೋಭಾಯಾತ್ರೆಯು ಭಜನೆ,ಕೊಂಬು,ವಾದ್ಯ,ಚೆಂಡೆವಾದನದೊಂದಿಗೆ ಉತ್ಸವ ಸ್ಥಾನದಿಂದ ರಾಜರಸ್ತೆಯಲ್ಲಿ ಗುರುಪುರ ಪೇಟೆಯಾಗಿ ಶ್ರೀ ವೈದ್ಯನಾಥ ದೈವಸ್ಥಾನದ ಬಳಿಯ ಫಲ್ಗುಣಿ ನದಿಯಲ್ಲಿ ವಿಗ್ರಹ ವಿಸರ್ಜಿಸಲಾಗುವುದು ಎಂದು ಸಾರ್ವಜನಿಕ ಶ್ರೀ ಗಣೇಶೊತ್ಸವ ಸೇವಾ ಸಮಿತಿ ಕೈಕಂಬ ಪ್ರಕಟಣೆಯಲ್ಲಿ ತಿಳಿಸಿದೆ.