ಅಡ್ಡೂರು ಸಹರಾ ಸಮೂಹ ಸಂಸ್ಥೆಗೆ ಗಣ್ಯರ ಭೇಟಿ
ಕೈಕಂಬ: ಸಹರಾ ಸಮೂಹ ಸಂಸ್ಥೆ ಅಡ್ಡೂರು ಇಲ್ಲಿಗೆ ಸೆ.೦೬ ಬುಧವಾರದಂದು ಸಚಿವ ಬಿ.ಝಡ್.ಝಮೀರ್ ಅಹಮ್ಮದ್ ಖಾನ್ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು.
ಸಂಸ್ಥೆಯ ಉಪನ್ಯಾಸಕ ವರ್ಗ,ಶಿಕ್ಷಕ-ಶಿಕ್ಷಕೇತರ ಬಳಗ ಮತ್ತು ವಿದ್ಯಾರ್ಥಿ ವೃಂದ ಶಾಲು ಹೊದೆಸಿ,ಪುಷ್ಪ ಗುಚ್ಚವನ್ನು ನೀಡುವ ಮೂಲಕ ಸಚಿವ ಬಿ.ಝಡ್.ಝಮೀರ್ ಅಹಮ್ಮದ್ ಖಾನ್ ಅವರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಸಂಪುಟದ ವಸತಿ ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಿ.ಝಡ್.ಝಮೀರ್ ಅಹಮ್ಮದ್ ಖಾನ್,ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ,ಮಾಜಿ ಸಚಿವ ರಮಾನಾಥ ರೈ,ಹರೀಶ್ ಕುಮಾರ್ ಎಮ್.ಎಲ್.ಸಿ,ಆರ್.ಕೆ.ಪೃಥ್ವಿರಾಜ್,ಬಿ.ಎ.ಬಾವ,ಗಿರೀಶ್ ಆಳ್ವ ಮತ್ತು ಸಹರಾ ಸಮೂಹ ಸಂಸ್ಥೆಯ ಅಧ್ಯಕ್ಷ ಯು.ಪಿ.ಇಬ್ರಾಹಿಂ,ಶಾಲಾ ಸಂಚಾಲಕ ಎ.ಕೆ.ಇಸ್ಮಾಯಿಲ್,ಸಂಸ್ಥೆಯ ಪ್ರಾಂಶುಪಾಲ ಕೇಶವ್ ಎಚ್,ಉಪಾಧ್ಯಕ್ಷರು,ಕಾರ್ಯದರ್ಶಿ,ಜೊತೆ ಕಾರ್ಯದರ್ಶಿ,ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಚಿವ ಬಿ.ಝಡ್.ಝಮೀರ್ ಅಹಮ್ಮದ್ ಖಾನ್‌ರಿಗೆ ನೆರೆದಿದ್ದ ಗಣ್ಯರ ಸಮ್ಮುಖದಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡದ ಅಹವಾಲು ಪ್ರತಿಯನ್ನು ನೀಡಲಾಯಿತು.
ಅಶ್ವಿನಿ ಸ್ವಾಗತಿಸಿದರು,ಉಪ ಪ್ರಾಂಶುಪಾಲರಾದ ದೇವಿಪ್ರಸಾದ್ ವಂದಿಸಿ,ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.