ಸೆ.18 ರಿಂದ 20 ರವರೆಗೆ ವಾಮದ ಪದವಿನಲ್ಲಿ 40 ನೇ ವರ್ಷದ ಗೌರಿ- ಗಣೇಶೋತ್ಸವ
ಬಂಟ್ವಾಳ: ವಾಮದ ಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 40 ನೇ ವರ್ಷದ ಗೌರಿ- ಗಣೇಶೋತ್ಸವವು ಸೆ.18 ರಿಂದ 20 ರವರೆಗೆ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾಮದಪದವಿನ ಶ್ರೀಗಣೇಶ ಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.18 ರಂದು ಬೆಳಿಗ್ಗೆ ಧ್ವಜಾರೋಹಣ ನಡೆದ ಬಳಿಕ ಶ್ರೀ ಗೌರಿ- ಗಣೇಶನ ಪ್ರತಿಷ್ಠಾಪನೆ ನಡೆಯಲಿದೆ.ಬಳಿಕ ಗೌರಿಪೂಜೆ,ಮಂಗಳೂರಿನ ಧಾರ್ಮಿಕ ಚಿಂತಕಿ ಶೋಭಾ ಮಯ್ಯ ಅವರು ಗೌರಿ ಹಬ್ಬದ ಮಹತ್ವದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.ಸಂಜೆ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಢಯುವುದು,ರಾತ್ರಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ನಡೆಯುವುದು.
ಸೆ.19 ರಂದು ಬೆಳಿಗ್ಗೆ ಭಜನೆ,ಸಾರ್ವಜನಿಕ ಗಣಹೋಮ ಸಂಜೆ ಭರತ ನಾಟ್ಯ ವೈಭವ ಜರುಗುವುದು,20 ರಂದು ಬೆಳಿಗ್ಗೆ ಭಜನೆ,ಸಾರ್ವಜನಿಕ ಗಣಹೋಮ,ಸಂಜೆ ಸಮಾರೋಪ ಸಮಾರಂಭ ಹಾಗೂ ಗೌರಿ ಗಣೇಶನ ಶೋಭಾಯಾತ್ರೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.