ಒಡ್ಡೂರು ಬಯೋ ಸಿಎನ್‌ಜಿ ಪ್ಲಾಂಟ್ ಗೆ ವಿಧಾನ ಪರಿಷತ್ ನ ಸಭಾಪತಿ ಹೊರಟ್ಟಿ ಭೇಟಿ
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ ನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಅನುಷ್ಠಾನಗೊಂಡಿರುವ ಒಡ್ಡೂರು ಎನರ್ಜಿ ಬಯೋ ಸಿಎನ್‌ಜಿ ಪ್ಲಾಂಟ್ ಗೆ ಕರ್ನಾಟಕ ವಿಧಾನಪರಿಷತ್ ನ ಸಭಾಪತಿ ಬಸವರಾಜ ಹೊರಟ್ಟಿಯವರು ಶನಿವಾರ ಭೇಟಿ ನೀಡಿ ವೀಕ್ಷಿಸಿದರು.

ಹಸಿ ತ್ಯಾಜ್ಯದಿಂದ ಸಿ.ಎನ್.ಜಿ ಉತ್ಪಾದಿಸುವ ಒಡ್ಡೂರು ಎನರ್ಜಿ ಘಟಕದ ನಿರ್ವಹಣೆ ಮತ್ತು ಚಟುವಟಿಕೆಗಳನ್ನು ವೀಕ್ಷಿಸಿದ ಸಭಾಪತಿ ಹೊರಟ್ಟಿ ಅವರು ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಘಟಕದ ಕುರಿತು ಸಭಾಪತಿ ಹೊರಟ್ಟಿ ಅವರಿಗೆ ಮಾಹಿತಿ ನೀಡಿದರು.
ಒಡ್ಡೂರು ಎನರ್ಜಿಯ ಆಡಳಿತ ಪಾಲುದಾರರಾದ ಉನ್ನತ್ ಆರ್. ನಾಯ್ಕ್,ಶಾಸಕರ ಪತ್ನಿ ಉಷಾ ಆರ್ ನಾಯ್ಕ್,ಬಿಜೆಪಿ ಬಂಟ್ವಾಳ ಮಂಡಲ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.