ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ “ಶಿಕ್ಷಕ ದಿನ” ಆಚರಣೆ
ಕೈಕಂಬ: ಸೆ.೫ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯ ಆಶ್ರಯದಲ್ಲಿ ಆಚರಿಸಲಾದ ” ಶಿಕ್ಷಕರ ದಿನಾಚರಣೆ ” ಯ ಸುಸಂದರ್ಭದಲ್ಲಿ ಆದರ್ಶ ಶಿಕ್ಷಕ,ತುಳುನಾಡಿನ ಸಂಸ್ಕೃತಿ ಪರಂಪರೆಗಳ ಬದುಕಿನ ಆರಾಧಕ ‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ ದ ಸಂಸ್ಥಾಪಕ,ಅದೆಷ್ಟೋ ಪ್ರಶಸ್ತಿ- ಸನ್ಮಾನಗಳಿಂದ ಪುರಸ್ಕೃತ,ಜನಸಾಮಾನ್ಯರ ಇತಿಹಾಸದ ಪುಟ ತೆರೆದ ಯಸ್ ವಿ ಯಸ್ ಕಾಲೇಜಿನ ವಿಶ್ರಾಂತ ಉಪ ಪ್ರಾಂಶುಪಾಲ ಇತಿಹಾಸ ವಿಭಾಗದ ಮುಖ್ಯಸ್ಥರು ಡಾ|| ತುಕಾರಾಮ ಪೂಜಾರಿ ಇವರನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಆವರಣದಲ್ಲಿ ಸನ್ಮಾನಿಸಲಾಯಿತು,ಸನ್ಮಾನ ಸ್ವೀಕರಿಸಿ ನೆರೆದಂತ ಫೋಟೋಗ್ರಾಫರ್ಸ್ ಗಳನ್ನು ಉದ್ದೇಶಿಸಿ ಮಾತನಾಡಿ ರಾಣಿ ಅಬ್ಬಕ ತುಳು ಅಧ್ಯಯನ ಕೇಂದ್ರದ ಸ್ಥಾಪನೆಯ ಉದ್ದೇಶ ಹಾಗೂ ಅದರ ಮಹತ್ವನ್ನು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಆನಂದ್ ಎನ್ ಬಂಟ್ವಾಳ ವಹಿಸಿದ್ದರು,ವೇದಿಕೆಯಲ್ಲಿ ಕಿಶೋರ್ ಎಸ್ ಕುಮಾರ ಅಧ್ಯಕ್ಷರು ಬಂಟ್ವಾಳ ವಲಯ,ಕಾರ್ಯದರ್ಶಿಗಳಾದ ವರುಣ್ ಕಲ್ಲಡ್ಕ ,ರವಿ ಕಲ್ಪನೆ, ಗೌರವಾಧ್ಯಕ್ಷ ಹರೀಶ್ ಕುಂದರ್,ಜಿಲ್ಲಾ ಕಾರ್ಯದರ್ಶಿ ಅಜಯ್ ಮಂಗಳೂರು,ಕುಮಾರಸ್ವಾಮಿ ಕನ್ಯಾನ,ಸತೀಶ್ ಕಾರ್ತಿಕ್,ಹರೀಶ್ ಮಾಣಿ,ಕೃಷ್ಣರಾಜ್,ರಮೇಶ್ ರಾವ್,ಹರೀಶ್ ನಾಟಿ,ಶರತ್ ಕಲ್ಲಡ್ಕ, ಜಿತೇಶ್ ಕನ್ಯಾನ,ರಾಜೇಂದ್ರ,ಮೋಹನ್,ರೋಷನ್ ಮೊರ‍್ನಾಡು,ರಾಜರತ್ನ,ವರುಣ್ ಕಲ್ಲಡ್ಕ,ನಿತಿನ್,ಸುಕುಮಾರ್ ಬಂಟ್ವಾಳ್,ಶ್ರೀ ಪ್ರಸಾದ್, ವಿಕೇಶ್, ಜೊಶೋ ಸಾಜನ್,ಅವಿನಾಶ್,ಹಿರಿಯರಾದ ದಾಮೋದರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದಯಾನಂದ್ ಬಂಟ್ವಾಳ ನಿರೂಪಿಸಿ,ಹರೀಶ್ ಕುಂದರ್ ಧನ್ಯವಾದವಿತ್ತರು.