ಶ್ರೀರಾಮ ಪದವಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಭವಿಷ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಪ್ರಾಂಶುಪಾಲ ಕೃಷ್ಣಪ್ರಸಾದ್ ಅವರು ಶಿಕ್ಷಕ ದಿನಾಚರಣೆಯ ಮಹತ್ವವನ್ನು ತಿಳಿಸಿ ಕೇವಲ ಕೊಠಡಿಗಳಲ್ಲಿ ಪಾಠ ಮಾಡಿ ಪರೀಕ್ಷೆ ಮಾಡುವವರು ಶಿಕ್ಷಕರಲ್ಲ, ಒಂದು ಅಕ್ಷರ ಅಥವಾ ಅನುಭವ ಕಲಿಸಿಕೊಟ್ಟವರೂ ಸಹ ಗುರುಗಳೇ,ಬೇರೆ ಯಾವ ವೃತ್ತಿಯಲ್ಲಿಯೂ ಸಿಗದ ತೃಪ್ತಿ ಶಿಕ್ಷಕ ವೃತ್ತಿಯಲ್ಲಿದೆ ಎಂದು ಹೇಳಿದರು.

ಪದವಿ ಮಹಾವಿದ್ಯಾಲಯದ ಎಲ್ಲಾ ಬೋಧಕ-ಬೋಧಕೇತರ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಾಣಿಜ್ಯ ವಿದ್ಯಾರ್ಥಿನಿ ಕು. ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.