ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘ ದಿಂದ ಶೇ.೨೫ ಡಿವಿಡೆಂಡ್ ಘೋಷಣೆ
ಬಂಟ್ವಾಳ: ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘವು ಗತ ವರ್ಷದಲ್ಲಿ ೧೨೬.೩೫ ಕೋಟಿ ರೂ. ವ್ಯವಹಾರ ನಡೆಸಿ ೩೦.೬೨ ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಪಿ.ರವೀಂದ್ರ ಪೂಜಾರಿಯವರು ತಿಳಿಸಿದ್ದಾರೆ.

ಬಿ.ಸಿ.ರೋಡ್ ನ ಸ್ಪರ್ಶಾ ಕಲಾ ಮಂದಿರದಲ್ಲಿ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಸಂದರ್ಭ ಸಂಘದ ಸದಸ್ಯರಿಗೆ ಶೇ.೨೫ ಡಿವಿಡೆಂಡ್ ಪ್ರಕಟಿಸಿದರಲ್ಲದೆ ಶೇ.೯೮.೫೮ ಸಾಲ ವಸೂಲಾತಿಯು ಆಗಿದ್ದು ಸಂಘವನ್ನು ‘ಎ’ ತರಗತಿ ಎಂದು ವರ್ಗೀಕರಿಸಲಾಗಿದೆ ಎಂದರು.

ಇದೇ ವೇಳೆ ಸಂಘದ ಸದಸ್ಯರ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿ ಗೌರವಿಸಲಾಯಿತು.ಸಂಘದ ನಿರ್ದೇಶಕರುಗಳಾದ ಕೆ.ರುಕ್ಮಯ ಹೆಗಡೆ,ಪದ್ಮನಾಭ ಬಿ,ಎಂ.ಜಯರಾಮ ಮಯ್ಯ,ಅಬ್ದುಲ್ ಸತ್ತಾರ್,ಗಣೇಶ್ ಕಾರಂತ್,ಉಮಾವತಿ ಶೆಟ್ಟಿ,ದಿನೇಶ್,ಎಸ್.ಶಿವಪ್ಪ ನಾಯ್ಕ,ಕೆ.ಜಯಂತ ನಾಯಕ್ ರವರು ಉಪಸ್ಥಿತರಿದ್ದರು.

ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾ.ವಿ.ಹೊಳ್ಳ ಅವರು ವರದಿ ವಾಚಿಸಿದರು. ಉಪಾಧ್ಯಕ್ಷರಾದ ಅನಂತ್ ರಾಮ ಹೇರಳ ವಂದಿಸಿದರು,ನಿರ್ದೇಶಕ ಓಲ್ವಿನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.