ಸೆ.17ರಂದು ಬಂಟ್ವಾಳ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ವೇಷ ಸ್ಪರ್ಧೆ
ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಸೆ. 17ರಂದು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಕೃಷ್ಣ ಕೃಷ್ಣ ಶ್ರೀಕೃಷ್ಣ – ಎಂಬ ಕುಲಾಲರ ಕೃಷ್ಣ ವೇಷ ಸ್ಪರ್ಧೆ, ನನ್ನ ಕನಸಿನ ಕೃಷ್ಣ- ಚಿತ್ರಕಲಾ ಸ್ಪರ್ಧೆ ಮತ್ತು ಕುಸಾಲ್ ಪಾತೆರದ ಬಿರ್ಸೆರ್ – ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಮುದ್ದು ಕೃಷ್ಣ ವೇಷ, 5ರಿಂದ ಮೇಲ್ಪಟ್ಟು 10 ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ, ರಾಧಾಕೃಷ್ಣ ಮತ್ತು ಯಶೋಧಾ ಕೃಷ್ಣ ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ.ಚಿತ್ರಕಲೆಯಲ್ಲಿ ಕಿರಿಯ ಮತ್ತು ಹಿರಿಯ ವಿಭಾಗಗಳಿರುತ್ತದೆ. ಕುಸಾಲ್ ಪಾತೆರದ ಬಿರ್ಸೆರ್ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ಇರುವುದಿಲ್ಲ.
ಆದರೆ ಹಾಸ್ಯದಲ್ಲಿ ರಾಜಕೀಯ, ಜಾತಿನಿಂದನೆ ಮತ್ತು ಅಶ್ಲೀಲ ಮಾತುಗಳನ್ಙು ಬಳಸುವಂತಿಲ್ಲ. ವೇದಿಕೆಯಲ್ಲಿ ಪ್ರದರ್ಶಿಸುವ ಹಾಸ್ಯದ ತುಣುಕನ್ನು ವೀಡಿಯೋ ಮಾಡಿ 98808 36173ಕ್ಕೆ ಕಳುಹಿಸಬೇಕು. ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆಪ್ಟಂಬರ್ 10ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು. ಮಧ್ಯಾಹ್ನ 3.30ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ.
ಬಳಿಕ ಕಾರ್ಯಾಗಾರದ ಮೂರನೇ ಹಂತದ ಚೈತನ್ಯ 3.0ಗೆ ಚಾಲನೆ ನೀಡಲಾಗುವುದು. ನಂತರ ಕುಲಾಲ ಸೇವಾದಳದ ಸದಸ್ಯರಿಂದ ಸಾಂಸ್ಕೃತಿಕ ವೈಭವ, ಕಥಾರೂಪಕ ಪುಣ್ಯಕೋಟಿ ಮತ್ತು ಚಂದ್ರಯಾನ 3 ಕಾರ್ಯಕ್ರಮ ನಡೆಯಲಿದೆ ಎಂದು ಕುಲಾಲ ಸೇವಾದಳದ ದಳಪತಿ ರಾಜೇಶ್ ಕುಮಾರ್ ಎಚ್. ಮತ್ತು ಕಾರ್ಯದರ್ಶಿ ಜಯಂತ ಅಗ್ರಬೈಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.