ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ
ಬಂಟ್ವಾಳ: ಪ್ರತೀಯೊಬ್ಬರಿಗೂ ಕುತೂಹಲ ಇರಬೇಕು,ಕುತೂಹಲ ಇದ್ದರೆ ವಿಜ್ಞಾನಿಯಾಗುತ್ತಾನೆ. ಪ್ರತೀ ಮಗುವಿನಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಹೊರಹಾಕಲು ಈ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ ಮತ್ತು ಶ್ರೀರಾಮ ಪ್ರೌಢ ಶಾಲೆ, ಇವುಗಳ ಆಶ್ರಯದಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ ೨೦೨೩-೨೪ ಕಾರ್ಯಕ್ರಮವನ್ನು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ ವಹಿಸಿದ್ದರು.
ವೇದಿಕೆಯಲ್ಲಿ ಮಂಜುನಾಥನ್ ಎಂ.ಜಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ, ರಮೇಶ್ ಎನ್ ಸಹಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ಶಾಂಭವಿ ಆಡಳಿತಾಧಿಕಾರಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ, ರಾಘವೇಂದ್ರ ಬಲ್ಲಾಳ್ ಕ್ಷೇತ್ರ ಸಮನ್ವಯಧಿಕಾರಿ ಬಂಟ್ವಾಳ ಕಲ್ಲಡ್ಕ ವಲಯಶಿಕ್ಷಣ ಸಂಯೋಜಕಿ ಪ್ರತಿಮಾ, ಶ್ರೀ ಸತೀಶ್‌ರಾವ್, ಸಿ.ಆರ್.ಪಿ ಮಾಣಿ, ಶ್ರೀ ಸುಧಾಕರ ಭಟ್, ಸಿ.ಆರ್.ಪಿ ಕೆದಿಲ ಜ್ಯೋತಿ, ಸಿ.ಆರ್.ಪಿ ಕಲ್ಲಡ್ಕ ಹಾಗೂ ಸಿ.ಆರ್.ಪಿ ಮಲ್ಲಿಕಾರ್ಜುನ ಇವರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲ ಎಂ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ.ವಂದಿಸಿ, ಸುಮಿತ್ರ ಕಾರ್ಯಕ್ರಮವನ್ನು ನಿರ್ವಹಿಸಿದರು.ಕಲ್ಲಡ್ಕ ವಲಯದ 5 ಕ್ಲಸ್ಟರಿನ 27 ಶಾಲೆಗಳ 331 ಸ್ಪರ್ಧಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.