ಭಾರತೀಯ ಜೀವ ವಿಮಾ ನಿಗಮ ಶಾಖೆ ೬೭ನೇ ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ
ಬಂಟ್ವಾಳ: ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಶುಕ್ರವಾರ ನಡೆದ ೬೭ನೇ ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಥಮ ಗ್ರಾಹಕರ ಮೂಲಕ ಚಾಲನೆ ನೀಡಲಾಯಿತು.

ಇದೇ ವೇಳೆ ಬಿ.ಸಿ.ರೋಡಿನಿಂದ ಜಕ್ರಿಬೆಟ್ಟು ತನಕ ನಡೆದ ವಿಮಾ ಜಾಗೃತಿ ವಾಹನ ರ‍್ಯಾಲಿಗೆ ಹಿರಿಯ ಶಾಖಾಧಿಕಾರಿ ಕೆ.ಸತೀಶ ಕುಮಾರ್ ಚಾಲನೆ ನೀಡಿದರು.
ಸಂಚಾರಿ ಠಾಣಾಧಿಕಾರಿ ಸುತೇಶ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಉಪ ಶಾಖಾಧಿಕಾರಿ ಕೃಪಾಲ್, ಆಡಳಿತಾಧಿಕಾರಿ ವಾದಿರಾಜ್, ಉದಯಪಾಲ್, ಹಿರಿಯ ಅಧಿಕಾರಿ ಮಾಲತಿ, ನಝೀರ್, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ, ವಸಂತ ಕುಮಾರ್ ಶೆಟ್ಟಿ, ದಿನೇಶ ಮಾಮೇಶ್ವರ, ನಾರಾಯಣ ಬಲ್ಯ, ಹಿರಿಯ ಪ್ರತಿನಿಧಿ ಶಿವರಾಯ ಕಾಮತ್, ಸಂಕಪ್ಪ, ವಿಜಯ ಕುಮಾರಿ ಇಂದ್ರ ಸಹಿತ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಇದ್ದರು.