ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದಲ್ಲಿ ವಯೊನಿವೃತ್ತಿ ಬೀಳ್ಕೊಡುಗೆ ಸಮಾರಂಭ
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಹಿರಿಯ ಸಿಬ್ಬಂದಿ, ಬಂಟ್ವಾಳ ಬೈಪಾಸ್ ಶಾಖೆಯ ವ್ಯವಸ್ಥಾಪಕರಾದ ಮೋಹಿನಿ ಸದಾಶಿವರವರಿಗೆ ಬೀಳ್ಕೊಡುಗೆ ಸಮಾರಂಭ ಸಂಘದ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ಅವರು ವಹಿಸಿದ್ದರು.ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಜಲಜಾಕ್ಷಿ ಕುಲಾಲ್ ಮುಖ್ಯ ಅತೀಥಿಯಾಗಿ ಭಾಗವಹಿಸಿ ನಿವೃತ್ತರಿಗೆ ಶುಭ ಹಾರೈಸಿದರು, ನಿರ್ದೇಶಕರ ಪರವಾಗಿ ಸತೀಶ್ ಪಲ್ಲಮಜಲು ಹಾಗೂ ಜಯಂತಿ ಅವರು ಶುಭ ಹಾರೈಸಿದರು.
ಸಂಘದ ಪ್ರಧಾನ ವ್ಯವಸ್ಥಾಪಕರಾದ ಭೋಜ ಮೂಲ್ಯರು ಪ್ರಸ್ತಾವನೆಗೈದರು, ಶಾಖಾ ವ್ಯವಸ್ಥಾಪಕರಾದ ವಿನೋದ್ ವಿಟ್ಲ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ಕಮಲಾ ಅಭಿನಂದನಾ ಪತ್ರ ವಾಚಿಸಿದರು, ಕಛೇರಿ ಸಹಾಯಕರಾದ ವೆಂಕಟೇಶ್ ರವರು ವಂದಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ ಎಂ.ಕೆ ಕಾರ್ಯಕ್ರಮ ನಿರೂಪಿಸಿದರು.