ಅಮ್ಟಾಡಿ ಹಾಲು ಉತ್ಪಾದಕರ ಸಂಘದ ಮಹಾಸಭೆ
ಬಂಟ್ವಾಳ: ಅಮ್ಟಾಡಿ ಹಾಲು ಉತ್ಪಾದಕರ ಸಂಘ ನಿ. ಬಂಟ್ವಾಳ ಇದರ 2022- 2023ನೇ ಸಾಲಿನ ವಾರ್ಷಿಕ ಮಹಾಸಭೆಯು ಸಭೆಯು ಬಂಟ್ವಾಳ ಭಂಡಾರಿ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಉದಯ್ ಕುಮಾರ್ ಅಜಕಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಸ್ತರಣಾಧಿಕಾರಿಯಾದ ಶ್ರೀಮತಿ ಪ್ರಫುಲ್ಲ ಲಾಭ ಹಂಚಿಕೆ ಬಗ್ಗೆ ವಿವರಿಸಿದರು.ಈ ಸಾಲಿನಲ್ಲಿ ಸದಸ್ಯರಿಗೆ 10 ಶೇ.ಡಿವಿಡೆಂಟ್ ನ್ನು ಸಭೆಯಲ್ಲಿ ಘೋಷಿಸಲಾಯಿತು.ಅದೇ ರೀತಿ ಹಿರಿಯ ಹೈನುಗಾರಿಕಾ ಸದಸ್ಯರನ್ನು ಹಾಗೂ ಅತೀ ಹೆಚ್ಚು ಹಾಲು ಪೂರೈಸಿದ ಮೂವರು ಸದಸ್ಯರನ್ನು ಗೌರವಿಸಲಾಯಿತು.ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಕಾರ್ಯದರ್ಶಿ ಸತೀಶ್ ರೈ ವರದಿ ವಾಚಿಸಿದರು. ಒಕ್ಕೂಟದ ಉಪ ವ್ಯವಸ್ಥಾಪಕರಾದ ಕೇಶವ ಸುರುಳಿ,ವಿಸ್ತರಣಾಧಿಕಾರಿ ಜಗದೀಶ್,ಸಂಘದ ನಿರ್ದೇಶಕರುಗಳಾದ ಸಿರಿಲ್ ಅಲ್ಮೇಡಾ, ಯಶವಂತ್ ಶೆಟ್ಟಿ, ಬೇಬಿ ಶೆಟ್ಟಿ, ಕರುಣಾಕರ ಶೆಟ್ಟಿ, ಜೋಸೆಫ್ ಡಿಸೋಜಾ, ಫ್ಲೋರಿನ್, ವಸಂತಿ ಶೆಟ್ಟಿ,
ಸಂಘದ ಹಾಲು ಪರಿವೀಕ್ಷಕಿ ವೀಣಾ ಲೋಬೋ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಸ್ವಾಗತಿಸಿದರು.ನಿರ್ದೇಶಕರಾದ ಅನಿಲ್ ಹೆರಾಲ್ಡ್ ಫ್ರೇಂಕ್ ವಂದಿಸಿದರು.