ಶ್ರೀ ಭದ್ರಕಾಳೀ ದೇವಿ ದೇವಸ್ಥಾನದ ನಾಗದೇವರಿಗೆ ತಂಬಿಲ
ಬೆಂಜನಪದವು: ಬಂಟ್ವಾಳ ತಾಲೂಕಿನ ಬೆಂಜನಪದವು ಶ್ರೀ ಭದ್ರಕಾಳೀ ದೇವಿ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ಸೋಮವಾರ ನಾಗಬನದಲ್ಲಿ ನಾಗ ತಂಬಿಲ ಸೇವೆ ನಡೆಯಿತು.

ನಾಗದೇವರಿಗೆ ಹಾಲಾಭಿಷೇಕ, ಸೀಯಾಳಾಭಿಷೇಕ ಹಾಗೂ ತಂಬಿಲ ಸೇವೆಯ ಪೂಜಾ ವಿಧಿ ವಿಧಾನಗಳನ್ನು ಕ್ಷೇತ್ರದ ತಂತ್ರಿ ಲೋಕೇಶ್ ಶಾಂತಿಯವರು ನೆರವೇರಿಸಿದರು. ಶ್ರೀ ಕ್ಷೇತ್ರದ ಧರ್ಮದರ್ಶಿ ಬಿ. ರಮೇಶ್ ಬೆಂಜನಪದವು ಹಾಗೂ ಭಕ್ತಾಧಿಗಳು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
