ಗಾಣದಕೊಟ್ಯ ನಿವಾಸಿ ದೆಯ್ಯಕ್ಕ ನಿಧನ
ಬಂಟ್ವಾಳ:ಇಲ್ಲಿನ ಸಜಿಪಮೂಡ ಗ್ರಾಮದ ಗಾಣದಕೊಟ್ಯ ನಿವಾಸಿ, ಕೃಷಿಕ ದಿವಂಗತ ಬಾಬು ಮೂಲ್ಯ ಇವರ ಪತ್ನಿ ದೆಯ್ಯಕ್ಕ (89) ಇವರು ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ನಿಧನರಾದರು.

ಮೃತರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಮೃತರು ನೇಜಿ ನಾಟಿ ಸಹಿತ ಕೃಷಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದರು.