ಶ್ರೀ ಕ್ಷೇತ್ರ ಪೊಳಲಿಗೆ ಖ್ಯಾತ ಚಿತ್ರ ನಟಿ ಮಾಲಾಶ್ರೀ ಭೇಟಿ
ಪೊಳಲಿ:ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿಗೆ ಖ್ಯಾತ ಚಿತ್ರ ನಟಿ ಮಾಲಾಶ್ರೀ ಮಂಗಳವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಾಲಾಶ್ರೀ ಅವರ ಮಗ ಹಾಗೂ ಚಿತ್ರ ನಟಿ ಮಗಳೊಂದಿಗೆ ಕುತ್ತಾರು ಶ್ರೀ ಕೊರಗಜ್ಜ ಸಾನಿಧ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಳಲಿ ಕ್ಷೇತ್ರದ ಬಗ್ಗೆ ತಿಳಿದುಕೊಂಡ ಅವರು ದೇವಿಯ ದರ್ಶನ ಪಡೆಯಲು ಮಕ್ಕಳೊಂದಿಗೆ ಆಗಮಿಸಿದರು.

ಪ್ರಥಮ ಬಾರಿಗೆ ಆಗಮಿಸಿದ ಮಾಲಾಶ್ರಿಯವರು ಶ್ರೀ ರಾಜರಾಜೇಶ್ವರೀ ತಾಯಿಯ ದರ್ಶನ ಪಡೆದು ದೇವಸ್ಥಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಳದ ಅರ್ಚಕರಾದ ನಾರಾಯಣ ಭಟ್ ಪ್ರಸಾದ ನೀಡಿದರು.

ಈ ಸಂದರ್ಭದಲ್ಲಿ ಎ.ಜೆ ಹಾಸ್ಪಿಟಲ್ ಡೈರೆಕ್ಟರ್ ಡಾ.ಪ್ರಶಾಂತ್ ಶೆಟ್ಟಿ ,ಕುತ್ತಾರು ಮಾಗಂದಡಿ ಪ್ರೀತಮ್ ಶೆಟ್ಟಿ , ಹಾಗೂ ವಿದ್ಯಾಚರಣ್ ಭಂಡಾರಿ ಮೊಗರುಗುತ್ತು ಮತ್ತಿತರರು ಅವರೊಂದಿಗೆ ಇದ್ದರು.