ಸೌಜನ್ಯಳನ್ನು ಕೊಲೆ ಪ್ರಕರಣದ ನೈಜ ಆರೋಪಿಗೆ ಶಿಕ್ಷೆಯಾಗುವಂತೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಾರ್ಥನೆ
ಪೊಳಲಿ: ಕುಮಾರಿ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆಗೈದ ನೈಜ ಆರೋಪಿಗಳಿಗೆ ಶಿಕ್ಷೆ ಆಗಲಿ ಎಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಆ.೭ರಂದು ಸೋಮವಾರ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಜ್ರಕಾಯ ಶಾಖೆ ಪಲ್ಲಿಪಾಡಿ ಕರಿಯಂಗಳ ವಲಯ ಕಂಡದಬೆಟ್ಟು ಗುಂಡಿಕುಮೇರ್ ಇದರ ವತಿಯಿಂದ ಶ್ರೀ ರಾಜರಾಜೇಶ್ವರೀ ಅಮ್ಮನವರಲ್ಲಿ ಪ್ರಾರ್ಥಿಸಲಾಯಿತು.
![](https://www.suddi9.com/wp-content/uploads/2023/08/011-650x237.jpg)
![](https://www.suddi9.com/wp-content/uploads/2023/08/0022-650x309.jpg)
ಕ್ಷೇತ್ರದ ಅರ್ಚಕರಾದ ಪರಮೇಶ್ವರ ಭಟ್ ,ವೆಂಕಟೇಶ್ ನಾವಡ ಪೊಳಲಿ, ಸುಕೇಶ್ ಚೌಟ ಬಡಕಬೈಲ್,ಬಜರಂಗದಳ ಬಂಟ್ವಾಳ ಪ್ರಖಂಡದ ಸಹಸತ್ಸಂಗ ಪ್ರಮುಖ್ ಲೋಕೇಶ್ ಲಚ್ಚಿಲ್, ವಜ್ರಕಾಯ ಘಟಕ ಸಂಚಾಲಕ್ ರೋಹಿತ್ ಗುಂಡಿಕುಮೇರ್, ಅಧ್ಯಕ್ಷರು ಚಂದ್ರಶೇಖರ್ ಕಂಡದಬೆಟ್ಟು, ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಕಿಶೋರ್ ಪಲ್ಲಿಪಾಡಿ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮಮತಾ ಪದ್ಮನಾಭ ಪೂಜಾರಿ, ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಯಶವಂತ್ ಕೋಟ್ಯಾನ್ ಪೊಳಲಿ,ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರು ಚಂದ್ರಾವತಿ ಪೊಳಲಿ ಹಾಗೂ ವಿವಿಧ ಸಂಸ್ಥೆಯ ಪ್ರಮುಖರು ಸೇರಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.