ರೋಟರಿ ಕ್ಲಬ್ ಗಳ ಸಹಯೋಗದಲ್ಲಿ ಕೆಸರ್‌ಡ್ ಒಂಜಿ ದಿನ ಕ್ರೀಡಾಕೂಟ
ಬಂಟ್ವಾಳ: ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಇದರ ವತಿಯಿಂದ ರೋಟರಿ ಕ್ಲಬ್ ಬಂಟ್ವಾಳ ಟೌನ್, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ರೋಟರಿ ಕ್ಲಬ್ ಮಡಂತ್ಯಾರು, ರೋಟರಿ ಕ್ಲಬ್ ಮೊಡಂಕಾಪು ಇದರ ಸಹಕಾರ ದೊಂದಿಗೆ ಕೆಸರ್‌ಡ್ ಒಂಜಿ ದಿನ ಕೆಸರು ಗದ್ದೆ ಕ್ರೀಡಾ ಕೂಟ ಬಿ.ಸಿ.ರೋಡ್ ಸ್ಪರ್ಶಾಕಲಾ ಮಂದಿರ ಗದ್ದೆಯಲ್ಲಿ ನಡೆಯಿತು.
ರೋಟರಿ ಡಿಸ್ಟ್ರಿಕ್ಟ್ ಚೆಯರ್‌ಮೇನ್ ವಿಶ್ವಾಸ್ ಶೆಣೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತುಳುನಾಡ ಸಂಸ್ಕೃತಿ ಎಂದರೆ ಕೃಷಿ ಸಂಸ್ಕೃತಿ. ಕೃಷಿ ಕಾರ್ಯದ ಜತೆ ಮನರಂಜನೆ ಜತೆ ಮಾನಸಿಕ, ದೈಹಿಕ ಶಕ್ತಿ ನೀಡುವ ಕೆಸರು ಗದ್ದೆ ಕ್ರೀಡಾಕೂಟ ಹಿಂದಿನಿಂದಲೂ ನಡೆದು ಬಂದಂತಹ ಪರಂಪರೆ, ಇದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಆಧುನಿಕ ಕೃಷಿಯಿಂದ ಕಣ್ಮರೆಯಾಗುತ್ತಿರುವ ಗದ್ದೆಯ ಕೃಷಿ ಯನ್ನು, ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಸಹಾಯಕ ಗವರ್ನರ್ ರಾಘವೇಂದ್ರ ಭಟ್‌ಹೊಕ್ಕಾಡಿಗೋಳಿ ಅವರು ಮಾತನಾಡಿ, ಕೃಷಿಯಲ್ಲಿ ಗತ ಇತಿಹಾಸಗಳ ನೆನಪು, ನಮ್ಮ ಪೂರ್ವಜರು ಬಂದಂತಹ ಕಷ್ಟದ ದಿನಗಳನ್ನು ನಾವು ಸ್ಮರಿಸಬೇಕು ಹಾಗೂ ಕೃಷಿಯನ್ನು ಉತ್ತೇಜಿಸಬೇಕು ಎಂದರು,
ವಲಯ ಸೇನಾನಿ ಮೈಕಲ್ ಡಿಕೋಸ್ಟ, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ರೋಟರಿ ಬಂಟ್ವಾಳ ಟೌನ್ ಅಧ್ಯಕ್ಷ ಸುರೇಶ್ ಸಾಲ್ಯಾನ್, ರೋಟರಿ ಕ್ಲಬ್ ಮೊಡಂಕಾಪು ಅಧ್ಯಕ್ಷ ಪಿ.ಎ. ರಹೀಂ, ರೋಟರಿ ಕ್ಲಬ್ ಮಡಂತ್ಯಾರು ಅಧ್ಯಕ್ಷ ಟಿ.ವಿ. ಶ್ರೀಧರ್ ಭಟ್, ರೋಟರಿ ಕ್ಲಬ್ ಸಿದ್ದಕಟ್ಟೆ ಅಧ್ಯಕ್ಷ ಮೋಹನ್ ಜಿ. ಮೂಲ್ಯ ಉಪಸ್ಥಿತರಿದ್ದರು. ಸಂಜೆ ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಾಮಚಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ಸುರೇಶ್ ಸಾಲ್ಯಾನ್ ವಂದಿಸಿದರು. ಸುರೇಶ್ ಶೆಟ್ಟಿ ಹಾಗೂ ಜಯರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.