ಬಂಟ್ವಾಳ: ಆದಿ ದ್ರಾವಿಡ ಸಮಾಜ ಸೇವಾ ಸಂಘ ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ:ಇಲ್ಲಿನ ಆದಿ ದ್ರಾವಿಡ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ್ ಮತ್ತು ಉಪಾಧ್ಯಕ್ಷರಾಗಿ ಲತೀಶ್ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಉಮೇಶ್, ಜತೆ ಕಾರ್ಯದರ್ಶಿಯಾಗಿ ಸುಕೇಶ್, ಕೋಶಾಧಿಕಾರಿಯಾಗಿ ಪ್ರಕಾಶ್, ಕ್ರೀಡಾ ಕಾರ್ಯದರ್ಶಿಯಾಗಿ ಚಂದ್ರಹಾಸ, ಸಂಘಟನಾ ಕಾರ್ಯದರ್ಶಿಯಾಗಿ ನಾರಾಯಣ, ಕ್ರೀಡಾ ಜತೆ ಕಾರ್ಯದರ್ಶಿಯಾಗಿ ಉಮೇಶ್, ಗೌರವ ಸಲಹೆಗಾರರಾಗಿ ಮೋಹನ್ ಬಡಗಬೆಳ್ಳೂರು, ರಾಜಾ ಚೆಂಡ್ತಿಮಾರ್, ಸತೀಶ್, ಗೌರವಾದ್ಯಕ್ಷರಾಗಿ ಧರ್ಣಪ್ಪ ಬಡಗಬೆಳ್ಳೂರು ಆಯ್ಕೆಗೊಂಡಿದ್ದಾರೆ. ಇದೇ ವೇಳೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಿದಾನಂದ, ನಾಗೇಶ್, ಶಶಿಧರ, ಜಯಂತಿ, ಜಾನಕಿ, ವೆಂಕಟೇಶ, ಸಂದೇಶ್ ಆಯ್ಕೆಗೊಳಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅಬರ್ಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ