ಬಂಟ್ವಾಳದಲ್ಲಿ ಬಿಜೆಪಿ “ಟಿಫಿನ್ ಬೈಠಕ್
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಬಿ.ಸಿ ರೋಡ್ ನಲ್ಲಿ ನಡೆದ “ಟಿಫಿನ್ ಬೈಠಕ್” ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾಗವಹಿಸಿದರು.ಈ ಸಂದರ್ಭದಲ್ಲಿ ಪಕ್ಷದ ವಿವಿಧ ಚಟುವಟಿಕೆ,ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷ ಸಂಘಟನೆಯ ಕುರಿತಂತೆ ಚರ್ಚಿಸಲಾಯಿತು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಯು, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಂ, ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ,ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ರಾಮ್ ದಾಸ್ ಬಂಟ್ವಾಳ,ಸುಧೀರ್ ಶೆಟ್ಟಿ ಕಣ್ಣೂರು,ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ, ರಾಜ್ಯ ವಕ್ತಾರ ವಿಕಾಸ್ ಪುತ್ತೂರು,ಪ್ರಮುಖರಾದ ರವೀಂದ್ರ ಕಂಬಳಿ,ಕಮಾಲಾಕ್ಷಿ ಪೂಜಾರಿ,ಸಂದೇಶ್ ಶೆಟ್ಟಿ, ಡೊಂಬಯ ಅರಳ,ಮೋನಪ್ಪ ದೇವಸ್ಯ,ಕೃಷ್ಣಪ್ಪ ಪೂಜಾರಿ ದೋಟ,ಪುರುಷೊತ್ತಮ ಶೆಟ್ಟಿ ವಾಮದಪದವು,ಪ್ರಕಾಶ್ ಅಂಚನ್,ಮೋಹನ್ ಪಿ.ಎಸ್., ನಂದರಾಮ ರೈ, ಉಮೇಶ್ ಅರಳ ಉಪಸ್ಥಿತರಿದ್ದರು.