ಬಂಟ್ವಾಳ:ಮಣಿಪುರದಲ್ಲಿ  ಪೈಶಾಚಿಕವಾಗಿ ನಡೆದ ದಾರುಣ ಘಟನೆಯನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆ ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಬಿ.ಸಿ.ರೋಡು ಮೇಲ್ಸ್ ತುವೆಯ ಕೆಳಭಾಗದಲ್ಲಿ ಶನಿವಾರಪ್ರತಿಭಟನೆ ನಡೆಯಿತು.ಮಣಿಪುರ ಸರಕಾರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮಣಿಪುರದ ಮುಖ್ಯ ಮಂತ್ರಿ ಬಿರೆನ್‌ ಸಿಂಗ್‌ ಕೂಡಲೇ ರಾಜಿನಾಮೆ ನೀಡಬೇಕು ಹಾಗೂ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜ್ಯಾರಿಗೊಳಿಸಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.


ಈ ಪ್ರತಿಭಟನೆಯಲ್ಲಿ ಸಾಲಿಡಾರಿಟಿ ಯೂತ್‌ ಮೂವ್‌ ಮೆಂಟ್‌ ನ ರಾಜ್ಯ ಕಾರ್ಯದರ್ಶಿ ದಾನಿಶ್‌ ಚೆಂಡಾಡಿ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್‌, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್‌,ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ,  ಫ್ಲೋಸಿ ಡಿಸೋಜಾ  ಮಾತನಾಡಿದರು.


ಸಂಘಟನೆಯ ಅಧ್ಯಕ್ಷರಾದ ಮೋಹನ್‌ ಶೆಟ್ಟಿ ಪಂಜಿಕಲ್ಲು, ಕೇಶವ ಪೂಜಾರಿ ಪಂಜಿಕಲ್ಲು, ಎಂ ಎಚ್‌ ಮುಸ್ತಫ,  ಬಿ.ಎಂ ಪ್ರಭಾಕರ ದೈವಗುಡ್ಡೆ, ಪ್ರೇಮನಾಥ ಕೆ, ಇಸ್ಮಾಯಿಲ್‌ ಅರಬಿ, ಮ್ಯಾಕ್ಸಿಂ ಡಿಸೋಜಾ, ಹರೀಶ್‌ ಬಿಸಿರೋಡು, ಪ್ರಕಾಶ್‌ ಶೆಟ್ಟಿ ಶ್ರೀ ಶೈಲ ತುಂಬೆ, ಮೋಹನ್‌ ಅರಳ, ಕಿಶೋರ್‌ ಕುಮಾರ್‌ ಬಿ.ಸಿ.ರೋಡು, ಮ್ಯಾಥ್ಯೂ, ಪಿಲ್ಲು ಸಾಹೇಬ್‌, ಇಬ್ರಾಹಿಂ ಉಳಿ, ಆರ್‌ ಟಿ ಐ ಕಾರ್ಯಕರ್ತ ಜೆ.ಪಿ, ರಜಾಕ್‌ ಗುಂಪಕಲ್ಲು, ಫೆಲಿಕ್ಸ್‌ ಪಿರೇರಾ ಬೆದ್ರಗುಡ್ಡೆ, ಸೆಲಿಂ ಬೋಳಂಗಡಿ, ರಿಝ್ವಾನ್‌ ಬೋಳಂಗಡಿ ಮುಂತಾದವರಿದ್ದರು.
ಸಂಘಟನೆಯ ಕಾರ್ಯದರ್ಶಿ ಸುರೇಶ್‌ ಕುಮಾರ್‌ ಬಂಟ್ವಾಳ್‌ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *